ಪುತ್ತೂರು : ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪ್ರಚಾರ ಕಾರ್ಯ ಹಿನ್ನೆಲೆ ಕಾರ್ಯಕರ್ತರ ಸಮಾವೇಶ ಪುತ್ತೂರಿನಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ವೇದಿಕೆ ಬದಿಯಲ್ಲಿದ್ದ ಬಿಜೆಪಿ ಮುಖಂಡ ಅರುಣ್ ಪುತ್ತಿಲರನ್ನು ಕರೆದು ಎದುರಿನ ಸಾಲಿನ ತನ್ನ ಹತ್ತಿರದಲ್ಲೇ ಕೂರಿಸಿಕೊಂಡ ವೀಡಿಯೋ ಭಾರಿ ವೈರಲ್ ಆಗಿತ್ತು.
ಭಾಷಣದಲ್ಲೂ 2023ರ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಪುತ್ತಿಲರ ಪಕ್ಷೇತರ ಸ್ಪರ್ಧೆ ಬಗ್ಗೆ ಮಾತನಾಡಿದ ಸಿಂಹ , ಒಬ್ಬ ವ್ಯಕ್ತಿಯ ಪರವಾಗಿ ನಿಂತು ನ್ಯಾಯ ಕೊಡಬೇಕು ಕೇಳಿದ ಕ್ಷೇತ್ರ ಇದ್ದರೆ ಪುತ್ತೂರು., ಎಂಬ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಇದೀಗ ಅದೇ ರೀಲ್ಸ್ ವೀಡಿಯೋವನ್ನು ತನ್ನ ಫೇಸ್ಬುಕಲ್ಲಿ ಹಂಚಿಕೊಂಡ ಪ್ರತಾಪ್ ಸಿಂಹ, ಪುತ್ತಿಲರ ಭೇಟಿ ಬಳಿಕ ಅವರ ಮೇಲಿನ ಗೌರವ ಇಮ್ಮಡಿಯಾಗಿದೆ. ಅವರನ್ನು ವಿಧಾನಸೌಧದಲ್ಲಿ ಕಾಣಲು ಬಯಸುತ್ತೇನೆ ಎಂದು ಹಂಚಿಕೊಂಡಿದ್ದಾರೆ.
ಪ್ರತಾಪ್ ಸಿಂಹ ಅವರ ಫೇಸ್ಬುಕ್ ಪೋಸ್ಟ್ ಕೂಡ ವೈರಲ್ ಆಗುತ್ತಿದೆ.