ಕೆಲಸದ ಹೊರೆ ನಡುವೆ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ದಂಪತಿ ತಮ್ಮ ಮೂರು ತಿಂಗಳ ಮಗುವನ್ನು ದತ್ತು ನೀಡಿದ್ದಾರೆ. ಈ ಕುರಿತು ಪತಿ ಅನಾಮಧೇಯವಾಗಿ ರೆಡ್ಡಿಟ್ನಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ.
“ನನ್ನ ಪತ್ನಿ ಕ್ಯಾಥರೀನ್ ತಮ್ಮ ಮೂರು ತಿಂಗಳ ಮಗಳು ಎಲಿಜಬೆತ್ ಆರೈಕೆ ಮತ್ತು ಕೆಲಸದ ನಡುವೆ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದಾಳೆ. ಆದರೆ ಅವಳು ಕೆಲಸ ಬಿಡಲು ಸಿದ್ದಲಿಲ್ಲ. ಇದರಿಂದಾಗಿ ನಾವಿಬ್ಬರು ಮಗುವನ್ನು ದತ್ತು ನೀಡಲು ತೀರ್ಮಾನಿಸಿದೆವು” ಎಂದು ಪತಿ ಹೇಳಿಕೊಂಡಿದ್ದಾನೆ.
ಅದೃಷ್ಟವಶಾತ್, ಕ್ಯಾಥರೀನ್ ಕೆಲಸದಲ್ಲಿ ನಿರತರಾಗಿದ್ದಾಗ ಕ್ಯಾಥರೀನ್ ಅವರ ತಾಯಿ ಮಗುವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಮಗುವನ್ನು ನೋಡಲು ಯಾರು ಇಲ್ಲ,ನನಗೆ ನನ್ನ ಮಗುವಿಗಿಂತ ಪತ್ನಿಯ ಆರೋಗ್ಯ ಮುಖ್ಯ. ಮಗಳಿಲ್ಲದೆ ಬದುಕಬಹುದು, ಆದರೆ ಹೆಂಡತಿಯಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪತಿ ಹೇಳಿಕೊಂಡಿರುವುದು ವರದಿಯಾಗಿದೆ.
ಮಗುವನ್ನು ದತ್ತು ಪಡೆದಿರುವುದು ಕ್ಯಾಥರೀನ್ ಅವರ ತಾಯಿ. ಮಗಳ ಕಷ್ಟ ಕಂಡು ಮಗುವಿನ ಸ್ವಂತ ಅಜ್ಜಿ ಮಗುವನ್ನು ದತ್ತು ಪಡೆದುಕೊಂಡಿದ್ದಾರೆ.

























