ಪುತ್ತೂರು : ದಿಢೀರ್ ಅಸ್ವಸ್ಥಗೊಂಡು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬನ್ನೂರು ಆನೆಮಜಲು ಎಂಬಲ್ಲಿಂದ ವರದಿಯಾಗಿದೆ.
ಆನೆಮಜಲು ಗಂಗಾಧರ ಮೃತರು.
ಘಟನೆ ಕುರಿತು ಮೃತರ ಪತ್ನಿ ಹರಿಣಾಕ್ಷಿಯವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗಾಧರ ರವರು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಸುಮಾರು 1 ವಾರದಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದರು. ಏ.2ರಂದು ನನ್ನ ತಮ್ಮನ ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಮಗನೊಂದಿಗೆ ತಾಯಿ ಮನೆ ಕಲ್ಲಡ್ಕಕ್ಕೆ ಹೋಗಿದ್ದು, ಪತಿ ಗಂಗಾಧರ ರವರು ಮನೆಯಲ್ಲಿದ್ದರು.
ರಾತ್ರಿ ವೇಳೆಗೆ ತವರು ಮನೆಯಲ್ಲಿರುವಾಗ ಪತಿ ಗಂಗಾಧರ ಅವರ ಅಣ್ಣ ರಾಜೀವ ರವರು ತಮ್ಮ ವಿಶ್ವನಾಥನಿಗೆ ಪೋನ್ ಕರೆ ಮಾಡಿ ಗಂಗಾಧರ ರವರು ಮನೆಯಲ್ಲಿರುವಾಗ ಒಮ್ಮೆಲೇ ಅಸೌಖ್ಯಗೊಂಡಿದ್ದು, ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು. ಬಳಿಕ ಪತ್ನಿ ರಾತ್ರಿಯೇ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಬಂದಾಗ ವೈದ್ಯರು ಗಂಗಾಧರ ಅವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಗಂಗಾಧರ ರವರು ಹೃದಯಾಘಾತ ಅಥವಾ ಇನ್ನಾವುದೋ ಕಾಯಿಲೆಯಿಂದ ಮೃತಪಟ್ಟಿರುವುದಾಗಿದೆ ಹರಿಣಾಕ್ಷಿಯವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


























