Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

    ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

    ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

    ಬೆಳ್ತಂಗಡಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 3.50 ಲಕ್ಷದ ಡಿಸೇಲ್‌ ಪತ್ತೆ..!!

    ಬೆಳ್ತಂಗಡಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 3.50 ಲಕ್ಷದ ಡಿಸೇಲ್‌ ಪತ್ತೆ..!!

    ರಾಮಕುಂಜದಲ್ಲಿ ಬಾವಿ ತೋಡುವಾಗ ಸ್ಪೋಟಕ ಬಳಕೆ: ಸಮೀಪದ ಮನೆಗಳಿಗೆ ಹಾನಿ : ಪ್ರಕರಣ ದಾಖಲು..!!!

    ರಾಮಕುಂಜದಲ್ಲಿ ಬಾವಿ ತೋಡುವಾಗ ಸ್ಪೋಟಕ ಬಳಕೆ: ಸಮೀಪದ ಮನೆಗಳಿಗೆ ಹಾನಿ : ಪ್ರಕರಣ ದಾಖಲು..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ವೀರಮಂಗಲ ಕುಮಾರಧಾರ ನದಿ ಬಳಿಯ ಕಟ್ಟೆ ವಿವಾದ ಸುಖಾಂತ್ಯ : ಏ.19 ರಂದು ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಮರ್ಪಣೆ : ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಕುಮಾರ್ ಜೈನ್ ಮಾಹಿತಿ

April 8, 2024
in ಪುತ್ತೂರು
0
ವೀರಮಂಗಲ ಕುಮಾರಧಾರ ನದಿ ಬಳಿಯ ಕಟ್ಟೆ ವಿವಾದ ಸುಖಾಂತ್ಯ : ಏ.19 ರಂದು ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಮರ್ಪಣೆ : ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಕುಮಾರ್ ಜೈನ್ ಮಾಹಿತಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನದ ಸಮಯದಲ್ಲಿ ತೆರಳುವ ವೀರಮಂಗಲದ ಕುಮಾರಧಾರ ನದಿ ಬಳಿಯ ಕಟ್ಟೆಯನ್ನು ಏ.19 ರಂದು ಶ್ರೀ ದೇವರಿಗೆ ಸಮರ್ಪಣೆ ಮಾಡುವ ಕಾರ್ಯಕ್ರಮ ನಡೆಯಲಿದೆ ಎಂದು ದಿನೇಶ್ ಕುಮಾರ್ ಜೈನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement
Advertisement
Advertisement

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಸಂದರ್ಭದಲ್ಲಿ ಅವಭೃತ ಸ್ನಾನಕ್ಕಾಗಿ ವೀರಮಂಗಲದ ಕುಮಾರಧಾರ ನದಿಯ ಬಳಿ ಇದ್ದ ದೇವರ ಕಟ್ಟೆಗೆ ಸುಮಾರು ಎಂಟುನ್ನೂರು ವರ್ಷಗಳಿಂದ ಜಳಕಕ್ಕಾಗಿ ಹೋಗುತ್ತಿದ್ದರು ಎನ್ನುವುದು ಜನರ ಅಭಿಪ್ರಾಯ ಇದೆ.

Advertisement
Advertisement

ಕಳೆದ 22 ವರ್ಷಗಳ ಹಿಂದೆ ಸದ್ರಿ ಜಳಕದ ಕಟ್ಟೆಯನ್ನು ಕಾಸೀಂ ಎಂಬವರು ಅತಿಕ್ರಮಿಸಿ ಬೇಲಿ ಹಾಕುವ ಸಂದರ್ಭದಲ್ಲಿ ಆಗಿನ ಆಡಳಿತ ಮೊಕ್ತೇಸರರಾದ ಎನ್.ಕೆ. ಜಗನ್ನಿವಾಸ ರಾವ್‌ ರವರು ಮತ್ತು ಆಡಳಿತ ಸಮಿತಿ ಎ. ಮಾಧವ (ಸ್ವಾಮಿ)ರವರು ಸ್ಥಳಕ್ಕೆ ಹೋಗಿ ಅಂದಿನ ಕಾರ್ಯನಿರ್ವಹಣಾಧಿಕಾರಿ ಉಮಾಕಾಂತ ರವರ ಸಮಕ್ಷಮದಲ್ಲಿ ಊರಿನ ನಾಗರಿಕರನ್ನು ಸೇರಿಸಿ ಬೇಲಿ ಹಾಕಿರುವುದನ್ನು ತೆರವುಗೊಳಿಸಿ ಅಂದು ದೇವರು ಕಟ್ಟೆಗೆ ಹೋಗುವ ವ್ಯವಸ್ಥೆಯನ್ನು ಮಾಡಿರುತ್ತಾರೆ.

ಸದ್ರಿ ಕಟ್ಟೆ ಇರುವ ಸ್ಥಳವು ಕಾಸಿಂ ರವರಿಗೆ ಸೇರಿದ್ದೆಂದು ಆ ಸಂದರ್ಭದಲ್ಲಿ ದೇವರ ಭಕ್ತಾದಿಗಳಿಗೆ ತಿಳಿದು ಬಂದಿರುತ್ತದೆ. ಆದರೆ ಅಲ್ಲಿ ಇದ್ದ ಕಟ್ಟೆ ಭಾಗಿರಥಿ ಎನ್ನುವವರ ಕುಟುಂಬಕ್ಕೆ ಸೇರಿದಾಗಿದ್ದು, ಅದರಲ್ಲಿ ನದಿಯ ಬದಿಯಲ್ಲಿ ಇದ್ದ ಅಶ್ವತಕಟ್ಟೆಗೆ ದೇವರು ಪೂಜೆ ಸ್ವೀಕರಿಸಿ ನದಿಯಲ್ಲಿ ಅವಭೃತ ಸ್ನಾನಕ್ಕೆ ಹೋಗುತ್ತಿದ್ದರು. ಕಾಲಕ್ರಮೇಣ ಈ ಜಾಗವನ್ನು ಅನ್ಯಮತೀಯರೋರ್ವರಿಗೆ ಮಾರಾಟ ಮಾಡಲಾಗಿ ಆ ಸಂದರ್ಭದಲ್ಲಿ 1942 ಸಬ್ ರಿಜಿಸ್ಟರ್ ದಸ್ತಾವೇಜುನಲ್ಲಿ ಕಂಡುಬರುವ ಉಲ್ಲೇಕದಂತೆ 10 ಸೆನ್ಸ್ ನ್ನು ಬಿಟ್ಟು ಮಾರಾಟ ಮಾಡಿಲಾಗಿತ್ತು.

ಸರಕಾರಿ ದಾಖಲೆ ಪ್ರಕಾರ ಆಗಿನ ಸರಕಾರದ ವ್ಯವಸ್ಥೆಯ ಲೋಪದೋಷದಿಂದಾಗಿ ಪಹಣಿಯಲ್ಲಿ 86ರ ಬದಲು 96 ಎಂದು ನಮೂದಾಗಿ ಕಳೆದ 48 ವರ್ಷಗಳಿಂದ ದೇವರು ಅನ್ಯಮತೀಯರ ಹೆಸರಿನಲ್ಲಿ ಇದ್ದ ಜಾಗದ ಕಟ್ಟೆಗೆ ದೇವರು ಜಳಕಕ್ಕಾಗಿ ಹೋಗುತ್ತಿದ್ದರು. ಕಳೆದ 22 ವರ್ಷಗಳ ಕೆಳಗೆ ಈ ವಿಚಾರ ಕೆಲವು ಶ್ರೀ ಮಹಾಲಿಂಗೇಶ್ವರ ದೇವರ ಭಕ್ತರ ಗಮನಕ್ಕೆ ಬಂದಿದ್ದು, ಅದರಂತೆ ಅಂದಿನಿಂದ ಸ್ಥಳೀಯ ಎರಡು ಧಾರ್ಮಿಕ ಸಂಘಟನೆ ಈ ಕಟ್ಟೆಯ ವಿಚಾರದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು.

ಆದರೆ ಯಾವುದೇ ಇತ್ಯರ್ಥಕ್ಕೆ ಬರದಿರುವ ಸಮಯದಲ್ಲಿ ಅನೇಕ ಸಂಧಾನ ಸೂತ್ರಗಳು ಪುತ್ತೂರಿನ ಗಣ್ಯರಿಂದ ಮಾಡಿದಾಗಲು ಪಹಣಿಯ ಮಾಲಕ ಕಾಸಿಂ ಒಪ್ಪಂದಕ್ಕೆ ಒಪ್ಪದೆ ನ್ಯಾಯಾಲಯದ ತೀರ್ಮಾನಕ್ಕಾಗಿ ಕಾಯುತ್ತಿದ್ದರು.

ಈ ಸಂದರ್ಭದಲ್ಲಿ ಮಾಧವ ಎ ( ಸ್ವಾಮಿ ಕಲಾ ಮಂದಿರದ ಮಾಲಕರು ಮತ್ತು ರತ್ನಾಕರ್ ನಾಯಕ್ ಶ್ರೀಧರ್ ಪಟ್ಟ ಕಲ್ಲೇಗ ) ರವರು ದಿನೇಶ್ ಕುಮಾರ್ ಜೈನ್ ಅವರ ಗಮನಕ್ಕೆ ಕಳೆದ 2023 ರ ಫೆಬ್ರವರಿ ತಿಂಗಳಲ್ಲಿ ತಂದಿದ್ದು, ಈ ಮೂವರು ತಿಳಿಸಿದ ವಿಷಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಚಾರಿಸಿದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಏನು ಏನೂ ದಾಖಲೆಗಳು ಇಲ್ಲದೆ ಇರುವುದು ದಿನೇಶ್ ಕುಮಾರ್ ಜೈನ್ ಅವರ ಗಮನಕ್ಕೆ ಬಂದಾಗ ನ್ಯಾಯಾಲಯದಲ್ಲಿ ಕೇಸ್ ನಡೆಸುತ್ತಿದ ನ್ಯಾಯವಾದಿ ಉದಯ ರವಿಯವರಲ್ಲಿ ಈ ಜಾಗದ ದಾಖಲೆ ಪತ್ರಗಳನ್ನು ಪಡೆದು ಒದಲಾಗಿ ಅದರಲ್ಲಿ ಇರುವ ಅನುಕೂಲಕರ ವಿಷಯವನ್ನು ಮನಗಂಡು ನ್ಯಾಯವಾದಿ ಉದಯ ರವಿಯವರ ಮುಖಾಂತರ ಎಸಿಯವರಿಗೆ ಮನವಿ ಮಾಡಿ ಹತ್ತು ಸೆನ್ಸ್ ಜಾಗವನ್ನು ಶ್ರೀ ಮಹಾಲಿಂಗೇಶ್ವರ ದೇವರ ಹೆಸರಿಗೆ ಪಹಣಿ 17/10 ನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ಅವಭೃತ ಸ್ನಾನದ ಕಟ್ಟೆ ಎಂದು ಮಾಡಲಾಯಿತು.

ಕಳೆದ ಮಾರ್ಚ್ ತಿಂಗಳಲ್ಲಿ ಕಾಸಿಂ ಅವರನ್ನು ಕರೆಸಿ ಸ್ವಾಮಿ ಮಾಧವ ಅವರ ಜೊತೆ ಪಟ್ಟ ಶ್ರೀಧರ್ ರತ್ನಕಾರ್ ನಾಯಕ್ ಮತ್ತು ದಿನೇಶ್ ಕುಮಾರ್ ಜೈನ್ ಜೊತೆ ಒಂದು ಸುತ್ತಿನ ಮಾತುಕತೆ ಮಾಡಿ ಕಟ್ಟೆಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ಒಪ್ಪಂದದ ತೀರ್ಮಾನ ಜಂಟಿಯಾಗಿ ಮಾಡಲಾಗಿದಂತೆ ಕಳೆದ ಎಪ್ರಿಲ್ ಸಂದರ್ಭದಲ್ಲಿ ನಡೆಯುವ ಜಾತ್ರೆಯ ಸಮಯದಲ್ಲಿ ಕಟ್ಟೆಗೆ ಸುತ್ತ ಕಾಂಪೌಂಡ್‌ ಗೋಡೆಯ ನಿರ್ಮಾಣ ಅಂದಿನ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯ ಮುಖಾಂತರ ರೂಪಾಯಿ 12.00 ಲಕ್ಷ ಖರ್ಚು ಮಾಡಿ ತಡೆಗೋಡೆ ಇಂಟರ್ ಲಾಕ್‌ನ್ನು ನವೀನ್‌ಚಂದ್ರ ರೈ ಅವರ ಮುಖಾಂತರ ಅಳವಡಿಸಲಾಯಿತು. ಮತ್ತು ರಂಜಿತ್ ಬಂಗೇರ, ಅಭಯ ಮಾರ್ಬಲ್ ಮಂಗಳೂರು ಪ್ರಶಾಂತ್ ನಾಯಕ್ ಕೊಡಿಪ್ಪಾಡಿ, ಸುಬ್ರಹ್ಮಣ್ಯ ಕೆಮ್ಮಿಂಜೆ, ಎ. ಮಾಧವ ಸ್ವಾಮಿ ಅವರ ಸಹಕಾರದೊಂದಿಗೆ ಕಟ್ಟೆಯನ್ನು ನವೀಕರಿಸಲಾಯಿತು.

ಕುಂಟಾರು ರವೀಶ್ ತಂತ್ರಿಯವರ ನೇತ್ವತೃದಲ್ಲಿ ಅಂದಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಕೇಶವ ಪ್ರಸಾದ್ ಮುಳಿಯ ರವರ ಮುಖಾಂತರ ಕಟ್ಟೆ ಶುದ್ದೀಕರಣಗೊಳಿಸಿ ಪೂಜೆ ಪುನಸ್ಕಾರಗಳನ್ನು ಮಾಡಿ ಸಾರ್ವಜನಿಕ ಅನ್ನಸಂತರ್ಪಣೆ ಮಾಡಲಾಗಿ ಕಟ್ಟೆಯನ್ನು ದೇವರಿಗೆ ಸಮರ್ಪಣೆ ಮಾಡಲಾಯಿತು. ಅದರಂತೆ ದೇವರು ಅವಭ್ರತ ಸ್ನಾನಕ್ಕಾಗಿ ಹೋಗುವ ಸಂದರ್ಭದಲ್ಲಿ ಜೊತೆ ಸಾವಿರಾರು ಜನರು ಬರುವಾಗ ಕಟ್ಟೆಯ ಪೂಜೆಯನ್ನು ನೋಡಲು ಜಾಗದ ಕೊರತೆ ಇತ್ತು ಅದಕ್ಕಾಗಿ ಅಂದಿನ ಶಾಸಕರಾದ ಸಂಜೀವ ಮಠಂದೂರು ರವರಲ್ಲಿ ತಡೆಗೋಡೆಗೆ ಬೇಡಿಕೆ ನೀಡಿದ್ದು, ತಕ್ಷಣವೇ ಸ್ಪಂದಿಸಿ ಸಣ್ಣ ನೀರಾವರಿ ಇಲಾಖೆಯಿಂದ 50 ಲಕ್ಷದ ಅನುದಾನವನ್ನು ತರಿಸಿ ಕಟ್ಟೆಯ ಎದುರು ಭಾಗದಲ್ಲಿಯೂ ಆಕಾರದಲ್ಲಿ ತಡೆಗೋಡೆ ನಿರ್ಮಿಸಿ ಅಧಿಕ ಜಾಗದ ವ್ಯವಸ್ಥೆಯನ್ನು ಮಾಡಿಸಿಕೊಟ್ಟರು.

ಈಗ ಸುತ್ತ ಹಾಕಿರುವ ಕಾಂಪೌಂಡ್ ಗೋಡೆಯ ಒಳಗೆ ಸ್ವಾಧೀನದಲ್ಲಿ ದೇವರ ಕಟ್ಟೆಯ ಬಳಿ 05.75 ಸೆನ್ಸ್ ಜಾಗ ಕಾಸಿಂ ಅವರ ಉಳಿಕೆ ಜಾಗವು ಇತ್ತು. ಈ ಜಾಗವನ್ನು ಕಾಸಿಂ ಅವರಿಂದ ಸ್ವಾಮಿ ಕಲಾ ಮಂದಿರದ ಮಾಲಕರು ಮಾದವ ಎ ಮತ್ತು ಅವರ ಕುಟುಂಬಸ್ಥರು ಅಲ್ಲಿಯ ಮಾರ್ಕೆಟ್ ರೇಟ್ ನೀಡಿ ಖರೀದಿ ಮಾಡಿ ಇತರ ಖರ್ಚುಗಳು ಸೇರಿ ದಾಖಲೆ ಪತ್ರಗಳನ್ನು ತಯಾರಿಸಿ ಶ್ರೀ ಮಹಾಲಿಂಗೇಶ್ವರ ದೇವರಿಗೆ 19 /04/2024 ಕ್ಕೆ ದೇವರ ಅವಭ್ರತ ಸ್ನಾನದ ಸಮಯದಲ್ಲಿ ದೇವರಿಗೆ ಸಮರ್ಪಣೆ ಮಾಡುವುದು ಎಂದು ನಿರ್ಧಾರವನ್ನು ಮಾಡಲಾಗಿದೆ.

ಈ ಸಂದರ್ಭದಲ್ಲಿ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆಯಿಂದ ವೀರಮಂಗಲದ ದೇವರ ಅವಭೃತ ಸ್ನಾನದ ಕಟ್ಟೆಗೆ ಹೋಗುವ 500 ಮೀಟರ್ ರಸ್ತೆಗೆ ಬೇಡಿಕೆಯ ಮೇರೆಗೆ ಶಾಸಕರಾದ ಅಶೋಕ್ ಕುಮಾರ್ ರೈ ರವರ ರೂ. 20 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆಯನ್ನು ಮಾಡಲಾಗಿದೆ.

ಈ ಕಾರ್ಯಕ್ಕಾಗಿ ಶ್ರೀ ಮಹಾಲಿಂಗೇಶ್ವರ ದೇವರು ವೀರಮಂಗಳ ದೇವರ ಕಟ್ಟೆಗೆ ಅವಭೃತ ಸ್ನಾನಕ್ಕಾಗಿ ಪೂಜೆ ಸ್ವೀಕರಿಸಿದ ಸಮಯದಲ್ಲಿ ಒಂದು ಪೂಜೆಯನ್ನು ಮಾಧವ ಅವರ ಹೆಸರಲ್ಲಿ ಅಜೀವ ಪರ್ಯಂತ ವಶಂಸ್ಕರಿಗೆ ಪ್ರಸಾದ ನೀಡಲು ಅಡಳಿತ ಮಂಡಳಿ ನಿರ್ಣಯವನ್ನು ಮಾಡಿದೆ.

ಈ ದೇವರ ಕಾರ್ಯಕ್ಕೆ ಭಕ್ತರಾದ ಚಿದಾನಂದ ಬೈಲಾಡಿ ವಕೀಲರು, ಶಿವಪ್ರಸಾದ್ ವಕೀಲರು, ಸೂರ್ಯನಾರಾಯಣ ವಕೀಲರು, ಭಾಮಿ ಅಶೋಕ ಶೆಣೈ, ರಂಜಿತ್ ಜೈನ್, ಸದಾನಂದ ನಾಯ್ಕ್ ಮುಕ್ರಂಪಾಡಿ, ಮುಳಿಯ ಕೇಶವ ಪ್ರಸಾದ್ ಮತ್ತು ಆಗಿನ ಆಡಳಿತ ಮಂಡಳಿಯ ಸದಸ್ಯರು, ಬಾಲಚಂದ್ರ ಸೊರಕೆ, ಧರ್ಣಪ್ಪ ಗೌಡ ವೀರಮಂಗಲ ಮತ್ತು ಮಹಾಬಲ ರೈ ವೀರಮಂಗಲ, ಶೀನಪ್ಪ ಮೂಲ್ಯ ವೀರಮಂಗಲ, ದಿ. ಮಾಜಿ ಕಾರ್ಯನಿರ್ವಹಣಾಧಿಕಾರಿ ಉಮಾಕಾಂತ ರಾವ್ ಸಹಕಾರ ನೀಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ದಿನೇಶ್ ಜೈನ್ ಅವರು ತಿಳಿಸಿದರು.

Advertisement
Previous Post

ಮಂಗಳೂರಿನ ಮಹಾನಗರ ಪಾಲಿಕೆಯ ಅಧಿಕಾರಿಗಳ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ : ಆರೋಪಿಗಳು ಖುಲಾಸೆ

Next Post

ಬಂಟ್ವಾಳ : ಚಲಿಸುತ್ತಿದ್ದ ವೇಳೆ ಕಾಣಿಸಿಕೊಂಡ ಬೆಂಕಿ : ರಸ್ತೆ ಮಧ್ಯೆ ಹೊತ್ತಿ ಉರಿದ ಡಸ್ಟರ್ ಕಾರು..!

OtherNews

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!
Featured

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

March 9, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
ಕ್ರೈಮ್

ಪುತ್ತೂರು: ಅಪ್ರಾಪ್ತನಿಗೆ ಹಲ್ಲೆ ಪ್ರಕರಣ ದಾಖಲು..!!

March 8, 2026
ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!
ಪುತ್ತೂರು

ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

March 8, 2026
ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!
Featured

ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

March 7, 2026
ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!
ಕ್ರೈಮ್

ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!

March 7, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಪುತ್ತೂರು: ಕಾರು ತಾಗಿದ್ದಕ್ಕೆ ಹಲ್ಲೆ: ಆಸ್ಪತ್ರೆಗೆ ದಾಖಲು..!!

March 6, 2026

Leave a Reply Cancel reply

Your email address will not be published. Required fields are marked *

Recent News

ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

March 10, 2026
ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

March 10, 2026
ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

March 10, 2026
ಮೆಸೇಜ್ ಮಾಡಿ ಲಾಡ್ಜ್​ಗೆ ಕರೀತಿದ್ಲು; ಸ್ನಾನಕ್ಕೆ ಕಳಿಸಿ ಹಣ ದೋಚುತ್ತಿದ್ಲು..! ಹನಿಟ್ರ್ಯಾಪ್ ಮಾಡುತ್ತಿದ್ದ ಲೇಡಿ ಅರೆಸ್ಟ್..!!

ಮೆಸೇಜ್ ಮಾಡಿ ಲಾಡ್ಜ್​ಗೆ ಕರೀತಿದ್ಲು; ಸ್ನಾನಕ್ಕೆ ಕಳಿಸಿ ಹಣ ದೋಚುತ್ತಿದ್ಲು..! ಹನಿಟ್ರ್ಯಾಪ್ ಮಾಡುತ್ತಿದ್ದ ಲೇಡಿ ಅರೆಸ್ಟ್..!!

March 10, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page