ಮಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಏಪ್ರಿಲ್ 14 ರಂದು ಮಂಗಳೂರಿಗೆ ಭೇಟಿ ನೀಡಲಿರುವ ಮೋದಿ, ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಆದರೇ ಬಿಜೆಪಿ ಮೂಲಗಳ ಪ್ರಕಾರ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶದ ಬದಲು ರೋಡ್ ಶೋ ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಎ.14ರಂದು ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಆದರೆ ಈಗ ಸಮಾವೇಶ ರದ್ದುಪಡಿಸಿ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ಸಮಾವೇಶ ಹಿನ್ನೆಲೆ ದ.ಕ ಜಿಲ್ಲಾ ಬಿಜೆಪಿ ಇಂದು ಚಪ್ಪರ ಮುಹೂರ್ತ ನಡೆಸಿದ್ದು, ಆದರೆ ಸಮಾವೇಶ ರದ್ದು ಮಾಡಿ ಮಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ಲಭಿಸಿದೆ.
ರೋಡ್ ಶೋನ ರೂಟ್ ಮ್ಯಾಪ್ ಇನ್ನಷ್ಟೇ ಸಿದ್ದಪಡಿಸಲಿದ್ದು, ಸಂಜೆ ವೇಳೆಗೆ ಮೋದಿ ರೋಡ್ ಶೋಗೆ ಪ್ಲಾನ್ ಪಕ್ಕಾ ಆಗಲಿದೆ ಎನ್ನಲಾಗುತ್ತಿದೆ.



























