ಗದಗ : ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ನಡೆದಿದೆ.
ಪ್ರೀತಿಸಿದ ಯುವತಿಯೊಂದಿಗೆ ವಿವಾಹವಾಗದ ಹಿನ್ನೆಲೆಯಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಪ್ಪಣ್ಣ ಕನಕಪ್ಪ ಗೊರಕಿ (28), ಲಲಿತಾ ರಾಜೇಂದ್ರ ಹಲಗೇರಿ (24) ಮೃತ ಪ್ರೇಮಿಗಳು.
ನರೇಗಲ್ಲ ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಏಪ್ರಿಲ್ 4 ರಂದು ಬೇರೊಬ್ಬ ಯುವಕನೊಂದಿಗೆ ಲಲಿತಾಗೆ ಮದುವೆ ಮಾಡಲಾಗಿತ್ತು.
ತಾನು ಪ್ರೀತಿಸಿದ್ದ ಪ್ರೇಮಿಯೊಂದಿಗೆ ವಿವಾಹವಾಗಲು ಸಾಧ್ಯವಾಗದ ಹಿನ್ನೆಲೆ ಸಾವಿಗೆ ಶರಣಾಗಿದ್ದಾರೆ. ಮರವೊಂದರ ಕೊಂಬೆಗೆ ಇಬ್ಬರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನರೇಗಲ್ಲ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.