ಪುತ್ತೂರು : ಪಡ್ನೂರು ಗ್ರಾಮ ಹಾಗೂ ಬನ್ನೂರು ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ವಿಜಯ ಪೂಜಾರಿಯವರು ಗ್ರಾಮಾಂತರ ಮಂಡಲಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ರವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್ ಪೆರಿಯತ್ತೋಡಿ, ಶಕ್ತೀ ಕೇಂದ್ರ ಪ್ರಮುಖ್ ನಾಗೇಶ್ ಬನ್ನೂರು, ಪಂಚಾಯತ್ ಸದಸ್ಯರಾದ ರಮಣಿ ಗಾಣಿಗ, ಪಕ್ಷದ ಪ್ರಮುಖರಾದ ಮಾಜಿ ಕೌನ್ಸಿಲರ್ ಸತೀಶ್, ಬಾಲಕೃಷ್ಣ ಜೋಯಿಷ್, ರಾಧಕೃಷ್ಣ, ಯುವಮೋರ್ಚಾ ಅಧ್ಯಕ್ಷರಾದ ನವೀನ್ ಪಡ್ನೂರು ಮೊದಲಾದವರು ಉಪಸ್ಥಿತರಿದ್ದರು.