ಬೆಂಗಳೂರು : ಮಕ್ಕಳ ಅಶ್ಲೀಲ ಫೋಟೋ ಹಾಗೂ ವೀಡಿಯೋ ವೀಕ್ಷಿಸಿ ವರ್ಗಾಯಿಸುತ್ತಿದ್ದ ಆರೋಪಿಯನ್ನು ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಅಸ್ಸಾಂ ಮೂಲದ ನೂರ್ ಇಸ್ಲಾಂ ಚೌದ್ರಿ (37) ಬಂಧಿತ ಆರೋಪಿ.
ಇಸ್ಲಾಂ ಚೌದ್ರಿ ಅಂತರ್ಜಾಲದಿಂದ ಮಕ್ಕಳ ಅಶ್ಲೀಲ ಫೋಟೋಸ್ ಹಾಗೂ ವೀಡಿಯೋಸ್ಗಳನ್ನ ಡೌನ್ ಲೋಡ್ ಮಾಡಿ ವರ್ಗಾಯಿಸುತ್ತಿದ್ದನಂತೆ. ಈತ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕಾನೂನಿನ ಪ್ರಕಾರ ಮಕ್ಕಳ ಅಶ್ಲೀಲ ಫೋಟೋ ಹಾಗೂ ವೀಡಿಯೋಗಳನ್ನು ಚಿತ್ರೀಕರಿಸುವುದು, ವರ್ಗಾಯಿಸುವುದು ಅಪರಾಧವಾಗಿದೆ.
ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಅಂಡ್ ಎಕ್ಸ್ ಪ್ಲಾಯ್ಟೆಡ್ ಚಿಲ್ಡ್ರನ್ ಸಾಫ್ಟ್ವೇರ್ ಸರ್ವಿಸ್ ಪ್ರೊವೈಡರ್ಗಳಿಂದ ಸಂಶಯಾಸ್ಪದ ಚಲನವಲನ ಕಂಡುಬಂದಿದೆ. ಕೂಡಲೇ ಪೂರ್ವ ವಿಭಾಗ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.