ವಿಟ್ಲ : ಮಾಡತ್ತಾರು ತರವಾಡು ಮನೆಯಲ್ಲಿ ಶ್ರೀ ದೈವಗಳ ಧರ್ಮ ನೇಮೋತ್ಸವ ಏ.21ರಿಂದ 22ರವರೆಗೆ ನಡೆಯಲಿದೆ.
ಏ.21 ರಂದು ಬೆಳಿಗ್ಗೆ ಗಣಹೋಮ, ನಾಗ ತಂಬಿಲ, ವೆಂಕಟ್ರಮಣ ಸೇವೆ ಜರುಗಲಿದೆ.
ರಾತ್ರಿ 8 ಗಂಟೆಗೆ ಕಲ್ಲುರ್ಟಿ, ಕೊರತಿ, ರಾಹು ಮತ್ತು ವರ್ಣರ ಪಂಜುರ್ಲಿ ದೈವಗಳಿಗೆ ಎಣ್ಣೆ ಕೊಡುವುದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 9.30 ಶ್ರೀ ದೈವಗಳ ನೇಮೋತ್ಸವ ಹಾಗೂ ಗಂಧ ಪ್ರಸಾದ ವಿತರಣೆ ನಡೆಯಲಿದೆ.
ಏ.22 ರಂದು ಬೆಳಿಗ್ಗೆ ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ದೈವಗಳ ನೇಮೋತ್ಸವ ಹಾಗೂ ಗಂಧ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.