ಪುತ್ತೂರು : ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಶರೀರಶಾಸ್ತ್ರ ವಿಭಾಗದ ಬೋಧಕರಾದ ಮೇಘಾ ಗೋಕುಲ್ ರವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ (ಮಾಹೆ) (Effect of low dose radiation and cynodon dactylon extract in wistar rat model of Comorbid Depression ; A novel approach towards therapeutic target in depression and anxiety) ವಿಷಯದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ.

ಡಾ. ನಯನತಾರಾ ಅರುಣ್ ಕುಮಾರ್, ಶರೀರಶಾಸ್ತ್ರದ ಸಹಪ್ರಾಧ್ಯಾಪಕರು, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು ಮತ್ತು ಯೋಜನೆಯ ಸಹಕಾರಿ ಡಾ. ರೇಖಾ ಡಿ. ಕಿಣಿ, ಶರೀರಶಾಸ್ತ್ರದ ಸಹಪ್ರಾಧ್ಯಾಪಕರು, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು ಇವರ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಲ್ಲಿ ಇವರು ಕೆಲಸ ಮಾಡಿದ್ದಾರೆ.
ಇವರ IBRO- ನ್ಯೂರೋಸೈನ್ಸ್ ಸ್ಕೂಲ್ ನೇಪಾಳ 2024, ಸೈಕೋಫಿಸಿಯಾಲಜಿ ಆಫ್ ನ್ಯೂರೋಲಾಜಿಕಲ್ ಡಿಸಾರ್ಡರ್ಸ್ ; ಜೀನೋಮಿಕ್ ಮತ್ತು ನಾನ್ವೆನೋಮಿಕ್ಸ್ ಪರ್ಸೆಪ್ಶನ್ ಏಪ್ರಿಲ್ 24 ರಿಂದ ಮೇ 7, 2024 ರವರೆಗೆ, ಇವರು ತಮ್ಮ ಪ್ರಬಂಧದ ಸಾರಾಂಶವನ್ನು ಪ್ರಸ್ತುತಪಡಿಸಲು ಪ್ರಯಾಣದ ಅನುದಾನದೊಂದಿಗೆ ಆಯ್ಕೆಯಾಗಿದ್ದಾರೆ.
ಇವರ ಪ್ರಬಂಧ ಪತ್ರಿಕೆ ಅನೇಕ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ಇವರು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಪಿ.ವಿ. ಗೋಕುಲ್‌ನಾಥ್ ಹಾಗೂ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ರವರ ಪುತ್ರಿ ಹಾಗೂ ಅಕ್ಷಯ್ ಕುಮಾರ್ ಸುರತ್ಕಲ್ ರವರ ಪತ್ನಿ.
ಇವರು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪುತ್ತೂರಿನ ಸೈಂಟ್ ವಿಕ್ಟರ್ಸ್ ಆಂಗ್ಲ ಮಾಧ್ಯಮ ಶಾಲೆ, ಪ್ರೌಢಶಾಲಾ ಶಿಕ್ಷಣವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪಿಯುಸಿ ಮತ್ತು ಬಿ.ಝಡ್.ಸಿ ಪದವಿಯನ್ನು ಸೈಂಟ್ ಫಿಲೋಮಿನಾ ಪುತ್ತೂರು, M.S.C in Medical Physology ಸ್ನಾತಕೋತ್ತರ ಪದವಿಯನ್ನು H.J.A K.M.C Medical Collage ಮಂಗಳೂರಿನಲ್ಲಿ ಪೂರೈಸಿರುತ್ತಾರೆ.

























