ಪುತ್ತೂರು : ಅನಾರೋಗ್ಯದಿಂದಿರುವ ವ್ಯಕ್ತಿಯೋರ್ವರನ್ನು ಆಂಬ್ಯುಲೆನ್ಸ್ ಮೂಲಕ ಕರೆ ತಂದು ಮತದಾನ ಮಾಡಿಸುವ ಮೂಲಕ ಸಾಮಾಜಿಕ ಕಾರ್ಯಕರ್ತರ ತಂಡ ಮಾದರಿ ಕೆಲಸ ಮಾಡಿದ್ದಾರೆ.

ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಬೂತ್ ಸಂಖ್ಯೆ 134 (ಬೀರ್ನಹಿತ್ಲು) ರಲ್ಲಿ ಅನಾರೋಗ್ಯದಿಂದಿರುವ ವ್ಯಕ್ತಿಯನ್ನು ಆಂಬ್ಯುಲೆನ್ಸ್ ಮೂಲಕ ಕರೆ ತಂದು ಮತದಾನ ಮಾಡಿಸಲಾಯಿತು.
ಬೀರಿಗ ನಿವಾಸಿ ತಿಮ್ಮಪ್ಪ ಗೌಡ ಎಂಬವರ ಅನಾರೋಗ್ಯದಿಂದಾಗಿ ಮಲಗಿದಲ್ಲಿಯೇ ಇದ್ದು, ಅವರನ್ನು ಅವರ ಮಗ ಗಣೇಶ್ ಹಾಗೂ ಸಾಮಾಜಿಕ ಕಾರ್ಯಕರ್ತರ ತಂಡ ಸೇರಿ ಸ್ಟ್ರಕ್ಚರ್ ಮೂಲಕ ಆಂಬ್ಯುಲೆನ್ಸ್ ನಲ್ಲಿ ಮತಗಟ್ಟೆ ಕರೆ ತಂದು ಮತದಾನ ಮಾಡಿಸುವ ಮೂಲಕ ಮಾದರಿ ಕಾರ್ಯವೆಸಗಿದ್ದಾರೆ.

























