ಪುತ್ತೂರು : ಎ.ಆರ್. ವಾರಿಯರ್ಸ್ ಮುಖ್ಯಸ್ಥ ಪ್ರಜ್ವಲ್ ರೈ ಪಾತಾಜೆ ಅವರಿಗೆ ಗಡಿಪಾರು ಆದೇಶ ಹೊರಡಿಸಿ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರು ಹಾಗೂ ಉಪವಿಭಾಗದ ದಂಡಾಧಿಕಾರಿಯವರು ಏ.2 ರಂದು ಹೊರಡಿಸಿದ್ದ ಆದೇಶಕ್ಕೆ ಉಚ್ಚ ನ್ಯಾಯಾಲಯ ತಡೆ ನೀಡಿದೆ.
ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ 55ರಂತೆ ಬಳ್ಳಾರಿ ಜಿಲ್ಲೆಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಅವರನ್ನು ಗಡಿಪಾರು ಮಾಡಲು ಶಿಫಾರಸ್ಸು ಮಾಡಲಾಗಿತ್ತು.
ರಾಜಕೀಯ ಪಕ್ಷವೊಂದರಲ್ಲಿ ಗುರುತಿಕೊಂಡಿರುವ ಪ್ರಜ್ವಲ್ ರೈ ಪಾತಾಜೆಯವರ ವಿರುದ್ದ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಕುರಿತಾಗಿ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಗಡಿಪಾರು ಆದೇಶಕ್ಕೆ ಶಿಫಾರಸ್ಸು ಮಾಡಲಾಗಿತ್ತು.
ಹೈಕೋರ್ಟ್ ವಕೀಲರಾದ ಧನಂಜಯ ಕುಮಾರ್ ಶೆಟ್ಟಿ ಮತ್ತು ಚಿನ್ನಯ್ ರೈ ಈಶ್ವರಮಂಗಲ ಪ್ರಜ್ವಲ್ ಪರ ವಾದ ಮಾಡಿ ತಡೆಯಾಜ್ಞೆ ತಂದಿದ್ದಾರೆ.

























