ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮ ನಡಾವಳಿಯು ಏ.28 ರಂದು ನಡೆಯಲಿದೆ.
ಏ.28 ರಂದು ಬೆಳಿಗ್ಗೆ 6 ಗಂಟೆಯಿಂದ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ನಡೆಯಲಿದೆ.
ಬೆಳಿಗ್ಗೆ ಗಂಟೆ 10 ರಿಂದ ಶ್ರೀ ಉಳ್ಳಾಲ್ತಿ ಅಮ್ಮನವರ ನೇಮ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ಜರುಗಲಿದೆ.
ಮಧ್ಯಾಹ್ನ 2 ಗಂಟೆ ನಂತರ ಶ್ರೀ ಕಾಳರಾಹು ಮತ್ತು ಶ್ರೀ ಮಲರಾಯ ದೈವಗಳ ನೇಮೋತ್ಸವ ನಡೆಯಲಿದೆ.



























