ಪುತ್ತೂರಿನಲ್ಲಿ ಏ.23 ರಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ರೋಡ್ ಶೋ ನಡೆದ ಸಂದರ್ಭ ವ್ಯಕ್ತಿಯೊಬ್ಬರ ಕಿಸೆಯಲ್ಲಿದ್ದ ನಗದು ನಾಪತ್ತೆಯಾದ ಕುರಿತು ವರದಿಯಾಗಿದೆ.
ಆರ್ಯಾಪು ಗ್ರಾಮದ ಚಂದ್ರಕುಮಾರ್ ಎಂಬವರು ನಗದು ಕಳೆದುಕೊಂಡವರು.
ಕಿಸೆಯಲ್ಲಿ 45 ಸಾವಿರ ರೂ. ಇಟ್ಟಿದ್ದು ಏ.23 ರಂದು ಮಧ್ಯಾಹ್ನ ಗಂಟೆ 12ರಿಂದ 2 ಗಂಟೆಯ ಸಮಯದಲ್ಲಿ ದರ್ಬೆಯಲ್ಲಿ ಅಣ್ಣಾಮಲೈ ಅವರ ರೋಡ್ ಶೋ ಸಂದರ್ಭ ಪ್ಯಾಂಟಿನ ಕಿಸೆಯಲ್ಲಿದ್ದ 500 ರೂ. ನೋಟಿನ ಕಂತೆಯ 45 ಸಾವಿರ ರೂ. ಅಂಗಡಿಗೆ ಹೋಗಿ ನೋಡಿದಾಗ ಹಣ ನಾಪತ್ತೆಯಾಗಿತ್ತು.
ಈ ಹಣ ಆಕಸ್ಮಿಕವಾಗಿ ಕಿಸೆಯಿಂದ ಬಿದ್ದಿರಬಹುದು ಅಥವಾ ಯಾರಾದರೂ ಕಿಸೆಯಿಂದ ತೆಗೆದಿರಬಹುದು ಎಂಬ ಸಂಶಯವಿದೆ ಎಂದು ಅವರು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

























