ಬೆಂಗಳೂರು : ನಮ್ಮ ಮೆಟ್ರೋ ರಾಜಧಾನಿ ಬೆಂಗಳೂರಿನ ಅತಿ ವೇಗದ ಸಂಪರ್ಕ ಸಾರಿಗೆಯಾಗಿದೆ. ಈ ನಮ್ಮ ಮೆಟ್ರೋ ರೈಲಿನಲ್ಲಿ ಅಸಭ್ಯ ವರ್ತಿಸಿದ ಯುವಕ-ಯುವತಿಯ ವಿರುದ್ಧ ಪ್ರಯಾಣಿಕರೋರ್ವರು ಸಾಮಾಜಿಕ ಜಾಲತಾಣದ ಮೂಲಕ ಬೆಂಗಳೂರು ಮೆಟ್ರೋ ರೈಲು ಸಂಚಾರ ನಿಗಮಕ್ಕೆ ದೂರು ನೀಡಿದ್ದಾರೆ.
ನಮ್ಮ ಮೆಟ್ರೋದ ಬಾಗಿಲು ಬಳಿ ಯುವಕ-ಯುವತಿ ನಿಂತು ತಬ್ಬಿಕೊಂಡಿದ್ದು, ಯುವತಿ ಯುವಕನಿಗೆ ಮುತ್ತು ನೀಡುತ್ತಿರುವ ದೃಶ್ಯವನ್ನು ಪ್ರಯಾಣಿಕ ವೀಡಿಯೋ ಮಾಡಿದ್ದಾರೆ. ಈ ವೀಡಿಯೋವನ್ನು ಎಕ್ಸ್ (ಟ್ವಿಟರ್) ಖಾತೆ ಮೂಲಕ ಪೋಸ್ಟ್ ಮಾಡಲಾಗಿದ್ದು ‘ನಮ್ಮ ಮೆಟ್ರೋದಲ್ಲಿ ಇದೇನು ಅಸಭ್ಯವರ್ತನೆ’ ಎಂದು ಪ್ರಶ್ನಿಸಿದ್ದಾರೆ.
‘ಬೆಂಗಳೂರು ಮೆಟ್ರೋ ನಿಧಾನವಾಗಿ ದೆಹಲಿ ಮೆಟ್ರೋ ರೀತಿ ಆಗುತ್ತಿದೆ. ಯುವತಿ ಯುವಕನಿಗೆ ಮುತ್ತು ನೀಡುತ್ತಿದ್ದಾಳೆ. ಮೆಟ್ರೋದಲ್ಲಿ ಅಸಭ್ಯ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಬಿಎಂಆರ್ಸಿಎಲ್ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.


























