ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಎಕ್ಸ್ಪ್ರೆಸ್ ಸುಮಾರು 70 ವಿಮಾನಗಳನ್ನು ರದ್ದುಗೊಳಿಸಿದೆ. ಇದಕ್ಕೆ ಸಿಬ್ಬಂದಿಗಳ ಸಾಮೂಹಿಕ ರಜೆ ಪ್ರಮುಖ ಕಾರಣವಾಗಿದೆ.
ಏರ್ ಇಂಡಿಯಾ ವಕ್ತಾರೊಬ್ಬರು ಈ ಬಗ್ಗೆ ಮಾತನಾಡಿದ್ದು, ‘ನಮ್ಮ ಕ್ಯಾಬಿನ್ ಸಿಬ್ಬಂದಿ ಒಂದು ವಿಭಾಗವು ಕೊನೆಯ ಕ್ಷಣದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ವರದಿ ಮಾಡಿದೆ. ಕಳೆದ ರಾತ್ರಿಯಿಂದ ವಿಮಾನ ವಿಳಂಬ ಮತ್ತು ರದ್ದತಿಗೆ ಇದು ಕಾರಣವಾಗಿದೆ. ಈ ಘಟನೆಯ ಹಿಂದಿನ ಕಾರಣವನ್ನು ಅರ್ಥ ಮಾಡಿಕೊಂಡು ಸಿಬ್ಬಂದಿಯ ಜೊತೆಗಿದ್ದೇವೆ. ಅವರಿಗೆ ಉಂಟಾದ ಅನಾನುಕೂಲಯನ್ನು ಪರಿಹರಿಸುತ್ತೇವೆ’ ಎಂದು ಹೇಳಿದ್ದಾರೆ.
ಏಪ್ರಿಲ್ ತಿಂಗಳ ಕೊನೆಯಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಕ್ಯಾಬಿನ್ ಸಿಬ್ಬಂದಿಯ ಒಂದು ವಿಭಾಗವು ಏರ್ಲೈನ್ಸ್ ಅನ್ನು ತಪ್ಪಾಗಿ ನಿರ್ವಹಿಸುತ್ತಿದೆ. ನೌಕರರನ್ನು ಸಮಾನವಾಗಿ ಕಾಣಲು ವಿಫಲವಾಗಿದೆ ಎಂದು ಹೇಳಿತ್ತು. ಇದೇ ಕಾರಣಕ್ಕೆ ಸಿಬ್ಬಂದಿಗಳು ಸಾಮೂಹಿಕ ರಜೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಉದ್ಯೋಗಿಗಳ ಸಂಘ ‘ಸುಮಾರು 300 ಕ್ಯಾಬಿನ್ ಸಿಬ್ಬಂದಿಯನ್ನು ಹೊಂದಿದೆ ಮತ್ತು ಮಾನ್ಯತೆ ಪಡೆದ ಒಕ್ಕೂಟವಾಗಿದೆ. ಆದರೆ ಇದರಲ್ಲಿ ಹೆಚ್ಚಿನವರು ಹಿರಿಯರಿದ್ದು ವ್ಯವಹಾರವನ್ನಯ ತಪ್ಪಾಗಿ ನಿರ್ವಹಿಸುತ್ತಿರುವುದು ಸಿಬ್ಬಂದಿ ಮೇಲೆ ಪರಿಣಾಮ ಬೀರಿದೆ’ ಎಂದು ಹೇಳಿದೆ.
ಅತ್ತ ವಿಮಾನ ಪ್ರಯಾಣಿಕರು ಕೂಡ ಈ ವಿಚಾರಕ್ಕೆ ವ್ಯಾಪಕವಾಗಿ ಪ್ರತಿಕ್ರಿಯಿಸಿದ್ದಾರೆ. ‘ಈ ಅನಿರೀಕ್ಷಿತ ಅಡಚಣೆಗಾಗಿ ನಾವು ನಮ್ಮ ಅತಿಥಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ವಿಮಾನ ಪ್ರಯಾಣ ರದ್ದಾಗಿರುವ ಕಾರಣ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ಅಥವಾ ಮತ್ತೊಂದು ದಿನಕ್ಕೆ ಮರು ಹೊಂದಿಕೆ ಮಾಡುವುದಾಗಿ ತಿಳಿಸಿದೆ.



























