ಉಪ್ಪಿನಂಗಡಿ : ಪುತ್ತೂರು-ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಕಾಮಗಾರಿಯ ಪ್ರಗತಿಯಲ್ಲಿದ್ದು, ವಾಹನ ಸಂಚಾರದ ಸುರಕ್ಷತೆಯ ದೃಷ್ಟಿಯಿಂದ ನೆಕ್ಕಿಲಾಡಿ ಆದರ್ಶ ನಗರದ ತಿರುವು ರಸ್ತೆಯನ್ನು ಸುಗಮ ಸಂಚಾರ ರಸ್ತೆ ನಿರ್ಮಿಸುವಂತೆ ಸ್ಥಳೀಯರ ಬೇಡಿಕೆಯ ಮೇರೆಗೆ ಮಾಜಿ ಶಾಸಕ ಸಂಜೀವ ಮಠಂದೂರು ರವರು ಮಂಜುಶ್ರೀ ಕನ್ಸ್ಟ್ರಕ್ಷನ್ ನ ದಯಾನಂದ ಶೆಟ್ಟಿಯವರಲ್ಲಿ ಸೂಚಿಸಿದರು.

ಈ ವೇಳೆ ನೆಕ್ಕಿಲಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ, ಮಾಜಿ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎನ್., ಸೇವಾ ಸಹಕಾರಿ ನಿರ್ದೇಶಕ ರಾಜೇಶ್ ಮುಕ್ಕಾರಿ, ರಮೇಶ್ ಉಪಸ್ಥಿತರಿದ್ದರು.



























