ಪುತ್ತೂರು : ತಮಿಳು ಕಾರ್ಮಿಕ ಮುಖಂಡ, ಕಾಂಗ್ರೆಸ್ ನಾಯಕ ಕೌಡಿಚ್ಚಾರು ನಿವಾಸಿ ಶಿವಕುಮಾರ್ (50) ಅವರು ಬೆಳಗಾವಿಯ ಖಾನಾಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

ಶಿವಕುಮಾರ್ ಅವರು ಕೆಲಸದ ನಿಮಿತ್ತ ಬೆಳಗಾವಿಯ ಖಾನಾಪುರಕ್ಕೆ ಹೋಗಿದ್ದು, ಅಲ್ಲಿ ಅವರು ಚಲಾಯಿಸುತ್ತಿದ್ದ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಸಾವಿತ್ರಿ, ಪುತ್ರಿಯರಾದ ಸಹನಾ ಹಾಗೂ ಪ್ರಿಯಾಂಕ, ಪುತ್ರ ಹೃತಿಕ್ ರಾಹುಲ್ ರನ್ನು ಅಗಲಿದ್ದಾರೆ.

























