ಪುತ್ತೂರು: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲ ಸಮೀಪದ ಚಿಮಿಣಿಗುಡ್ಡೆಯಲ್ಲಿ ನಡೆದಿದೆ.
ಈಶ್ವರಮಂಗಲ ಮುಂಡ್ಯ ನಿವಾಸಿ ವೃತ್ತಿಯಲ್ಲಿ ಮರದ ಕೆಲಸ ನಿರ್ವಹಿಸುತ್ತಿದ್ದ ಪ್ರಶಾಂತ್ (38) ಮೃತ ವ್ಯಕ್ತಿ.

ಹತ್ತು ದಿನದ ಹಿಂದೆಯಷ್ಟೇ ಪ್ರಶಾಂತ್ ರವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಮೃತರು ಪತ್ನಿ, ಮಗು, ತಂದೆ, ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.


























