ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಮಾರುತಿ 800 ಕಾರು ಪಲ್ಟಿಯಾದ ಘಟನೆ ಪುತ್ತೂರು ವಿಟ್ಲ ರಸ್ತೆಯ ಕಂಬಳಬೆಟ್ಟುವಿನಲ್ಲಿ ನಡೆದಿದೆ.

ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಕಾರು ಕಂಬಳಬೆಟ್ಟು ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಪರಿಣಾಮ ಓರ್ವನಿಗೆ ಗಾಯಗಳಾಗಿದ್ದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

























