ಪುತ್ತೂರು: ಚಿಕಿತ್ಸೆ ಸರಿಯಾಗಿ ನೀಡದ ಕಾರಣ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ಖಾಸಗಿ ಆಸ್ಪತ್ರೆಯ ವಿರುದ್ಧ ದೂರು ನೀಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ಉಳಿಗ್ರಾಮದ ಕೃಷ್ಣಪ್ಪ(51) ಮೃತ ವ್ಯಕ್ತಿ.
ಮೃತರ ತಮ್ಮ ವಸಂತ ದೂರು ನೀಡಿದ ವ್ಯಕ್ತಿ.
ತನ್ನ ಅಣ್ಣ ಕೃಷ್ಣಪ್ಪ (51) ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಸರಿ ನೀಡದ ಕಾರಣ ಅವರು ಮೃತಪಟ್ಟಿದ್ದಾರೆ ಹಾಗೂ ಅವರ ಸಾವಿನ ಬಗ್ಗೆ ಸಂಶಯವಿದೆ ಅವರ ಮರಣೋತ್ತರ ಪರೀಕ್ಷೆಯನ್ನು ನುರಿತ ವೈದ್ಯರ ಬಳಿ ಮಾಡಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿಲಾಗಿದೆ.


























