ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಮೇ.1 ರಂದು ರಾತ್ರಿ ನಡೆದ ಗೋ ಕಳ್ಳತನದ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಈ ಸಂದರ್ಭ ಬಜರಂಗದಳ ನಗರ ಪ್ರಖಂಡ ಸಂಯೋಜಕ ಜಯಂತ್ ಕುಂಜೂರುಪಂಜ, ಸಹ ಸಂಯೋಜಕ ಪ್ರವೀಣ್ ಕಲ್ಲೇಗ, ಗ್ರಾಮಾಂತರ ಸಂಯೋಜಕ ವಿಶಾಖ್ ಸಸಿಹಿತ್ಲು, ಹರ್ಷಿತ್ ಬಲ್ನಾಡ್, ರೂಪೇಶ್ ಬಲ್ನಾಡು, ಜೀವನ್ ಬಲ್ನಾಡು, ಗುರುರಾಜ್ ಬಲ್ನಾಡು ಉಪಸ್ಥಿತರಿದ್ದರು.

























