ಪುಣೆ : ಆನ್ಲೈನ್ನಲ್ಲಿ ಆಹಾರವನ್ನು ಆರ್ಡರ್ ಮಾಡಿ ತಿನ್ನುವವರು ತಮ್ಮ ಆಹಾರದ ಗುಣಮಟ್ಟದ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ. ಪುಣೆಯ ವ್ಯಕ್ತಿಯೊಬ್ಬರು ಜೊಮ್ಯಾಟೋ ಮೂಲಕ ರೆಸ್ಟೋರೆಂಟ್ನಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದು, ಅದರಲ್ಲಿ ಚಿಕನ್ ತುಂಡು ಸಿಕ್ಕಿದೆ. ಜೊಮ್ಯಾಟೋದವರು ತಮ್ಮ ಹಣವನ್ನು ಮರುಪಾವತಿಸಿದ್ದರೂ, ಈ ಘಟನೆಯು ನನ್ನ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಪೋಸ್ಟ್ ಎಕ್ಸ್ನಲ್ಲಿ ವೈರಲ್ ಆಗುತ್ತಿದ್ದಂತೆ, ಜೊಮ್ಯಾಟೋ ಕೂಡ ಇದಕ್ಕೆ ಪ್ರತಿಕ್ರಿಯಿಸಿದೆ. ಯಶ್ ಗಾಡೆ ಎಂಬ ವ್ಯಕ್ತಿ ಈ ಘಟನೆಯನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾನು ಮಹಾರಾಷ್ಟ್ರದ ಪುಣೆಯ ಕರವೇ ನಗರದ ಪಿಕೆ ಬಿರಿಯಾನಿ ಹೌಸ್ನಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದೆ. ಅದರಲ್ಲಿ ಚಿಕನ್ ಪೀಸ್ ಸಿಕ್ಕಿತು. ನಾನು ಸಸ್ಯಾಹಾರಿಯಾಗಿದ್ದು, ನಾನು ಈಗಾಗಲೇ ಮರುಪಾವತಿ ಪಡೆದಿದ್ದೇನೆ. ಆದರೆ, ನಾನು ಧಾರ್ಮಿಕ ವ್ಯಕ್ತಿಯಾಗಿರುವುದರಿಂದ ಇದು ನನ್ನ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು 19 ಸಾವಿರ ಜನರು ವೀಕ್ಷಿಸಿದ್ದಾರೆ.
ಜೊಮ್ಯಾಟೋ ಪ್ರತಿಕ್ರಿಯೆ :
ಈ ಘಟನೆ ನಿಮಗೆ ಎಷ್ಟು ದುಃಖ ತಂದಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ನಿಮ್ಮ ಆಹಾರದ ಆದ್ಯತೆಗಳನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ. ಅದನ್ನು ಎಂದಿಗೂ ಅಗೌರವಿಸುವುದು ನಮ್ಮ ಉದ್ದೇಶವಲ್ಲ. ದಯವಿಟ್ಟು ನಿಮ್ಮ ಆರ್ಡರ್ ಐಡಿಯನ್ನು ಡಿಎಂ ಮೂಲಕ ಹಂಚಿಕೊಳ್ಳಿ. ಇದರಿಂದ ನಾವು ಇದನ್ನು ರೆಸ್ಟೋರೆಂಟ್ ಪಾರ್ಟನರ್ಗಳೊಂದಿಗೆ ಬೇಗನೆ ಪರಿಹರಿಸಬಹುದು ಎಂದು ಪ್ರತಿಕ್ರಿಯಿಸಿದೆ.
ಇದಕ್ಕೆ ಕಮೆಂಟ್ ಮಾಡಿರುವ ಒಬ್ಬ ಬಳಕೆದಾರ ನೀವು ಸಸ್ಯಾಹಾರಿಯಾದರೆ ಶುದ್ಧ ವೆಜ್ ಹೋಟೆಲ್ನಿಂದ ಮಾತ್ರ ಆರ್ಡರ್ ಪಡೆಯುವಂತೆ ಸಲಹೆ ನೀಡಿದ್ದಾರೆ. ಸುಮ್ಮನೆ ಮಾಂಸಾಹಾರವನ್ನು ಕೂಡ ಮಾಡುವ ಹೋಟೆಲ್ನಿಂದ ಏಕೆ ಆಹಾರ ತರಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.


























