ಮಂಗಳೂರು : ಬಂಟ ರತ್ನ-2024, ಬಂಟ ವಿಭೂಷಣ-2024 ಪ್ರಶಸ್ತಿ ಪ್ರದಾನ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ಮೇ.19ರಂದು ಅಪರಾಹ್ನ 3ರಿಂದ ಮಂಗಳೂರು ಪುರಭವನದಲ್ಲಿ ನಡೆಯಲಿದೆ.
ಸಂಜೆ 3ರಿಂದ 4ರವರೆಗೆ ರಕ್ಷಣ್ ಶೆಟ್ಟಿ ಮಾಡೂರು ಬಳಗದವರಿಂದ ಸಂಗೀತ ರಸಸಂಜೆ ನಡೆಯಲಿದೆ.
ಸಂಜೆ 4ರಿಂದ 5.30 ಯಕ್ಷ ಯುವರತ್ನ ಧೀರಜ್ ರೈ ಸಂಪಾಜೆಯವರ ಭಾಗವತಿಕೆಯಲ್ಲಿ ಯಕ್ಷ ಬೊಳ್ಳಿ ಕಡಬ ದಿನೇಶ್ ರೈ ಸಾರಥ್ಯದಲ್ಲಿ ಯಕ್ಷಗಾನ-ನಾಟ್ಯ-ಹಾಸ್ಯ ವೈಭವ ನಡೆಯಲಿದೆ.
ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯಿಸುವ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ತುಳು ಪೌರಾಣಿಕ ಮತ್ತು ಭಕ್ತಿಪ್ರಧಾನ ಸಾಮಾಜಿಕ ನಾಟಕ ಮೂಡಿಬರಲಿದೆ.
ಐಕಳ ಹರೀಶ್ ಶೆಟ್ಟಿ, ಎಂ.ಆರ್.ಜಿ ಗ್ರೂಪ್ ನ ಆಡಳಿತ ನಿರ್ದೇಶಕರಾದ ಕೆ. ಪ್ರಕಾಶ್ ಶೆಟ್ಟಿ, ಕೆ. ಅಜಿತ್ ಕುಮಾರ್ ರೈ, ಪ್ರವೀಣ್ ಭೋಜ ಶೆಟ್ಟಿ, ಡಾ. ಎ. ಸದಾನಂದ ಶೆಟ್ಟಿ ಸಹಿತ ಹಲವು ಗಣ್ಯರ ನೇತೃತ್ವದಲ್ಲಿ ಕಾರ್ಯಕ್ರಮ ಮೂಡಿಬರಲಿದೆ.


























