ಕಾಣಿಯೂರು : ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಕಚೇರಿ ಕಟ್ಟಡ ಹಾಗೂ ಗೋದಾಮು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲು ಪ್ಲಾನ್ ಹಾಗೂ ಎಸ್ಟಿಮೇಟ್ ಮಾಡಲಾಗಿದ್ದು, ಸರಕಾರದಿಂದ ಅನುಮತಿ ಪಡೆಯಲಾಗಿದೆ. ಈ ಬಗ್ಗೆ ಕಟ್ಟಡ ನಿರ್ಮಾಣ ಪ್ರಾರಂಭದ ಅಂತಿಮ ರೂಪುರೇಷೆಗಳನ್ನು ಚರ್ಚಿಸಲು ಮೇ.15ರಂದು ಕಾಣಿಯೂರು ಪ್ರಧಾನ ಕಛೇರಿಯ ಸಭಾಭವನದಲ್ಲಿ ಅಂತಿಮ ಹಂತದ ಸಮಾಲೋಚನಾ ಸಭೆ ನಡೆಯಿತು.

ಈ ಸಭೆಯಲ್ಲಿ 2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡುವುದೆಂದು ತೀರ್ಮಾನಿಸಲಾಯಿತು ಹಾಗೂ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಪ್ರಮುಖರ ಸಲಹೆಗಳನ್ನು ಪಡೆದು ಆ ಸಲಹೆಗಳ ಪ್ರಕಾರವಾಗಿ ಮುಂದಿನ ವಾರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದೆಂದು ತೀರ್ಮಾನಿಸಲಾಯಿತು.

ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಕಾಣಿಯೂರು ಈ ಸಂಘವು 100 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಎಲ್ಲಾ ಸದಸ್ಯರ ಸಹಕಾರದಿಂದ ವಿಜೃಂಭಣೆಯಿಂದ ಆಚರಿಸಲು ಈ ಹಿಂದೆ ಸೇರಿದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

























