ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ಮನೆಗೆ ತೆರಳಿದ್ದ ಪೊಲೀಸ್ ಅಧಿಕಾರಿಯೋರ್ವರನ್ನು ಶಾಸಕರು ಮನೆಯಿಂದ ಹೊರ ಹೋಗುವಂತೆ ತಿಳಿಸಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಹರೀಶ್ ಪೂಂಜ ಅವರ ಹೇಳಿಕೆಯೊಂದನ್ನು ಪೊಲೀಸ್ ಅಧಿಕಾರಿ ಸಾಮಾಜಿಕ ಜಾಲತಾಣವಾದ ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿದ್ದರೆನ್ನಲಾಗಿದೆ.
ಇಂದು ಶಾಸಕರ ಮನೆಗೆ ಪೊಲೀಸ್ ಅಧಿಕಾರಿ ಆನಂದ್ ಅವರು ಆಗಮಿಸಿದ್ದು, ಈ ವೇಳೆ ಅಸಮಾಧಾನಗೊಂಡ ಶಾಸಕರು ಅವರನ್ನು ಹೊರಗೆ ಕಳುಹಿಸಿ ಜನ ಇದ್ದಾರೆ ಗಲಾಟೆ ಮಾಡುತ್ತಾರೆ ಎಂದು ಹೇಳಿದರು.
ಬಳಿಕ ಸೆಕ್ಯೂರಿಟಿ ನೀಡಿ ಪೊಲೀಸ್ ಅಧಿಕಾರಿ ಆನಂದ್ ಅವರನ್ನು ಶಾಸಕರ ಮನೆಯಿಂದ ಕರೆದುಕೊಂಡು ಹೋಗಲಾಯಿತು.