ಯಮವೇಗದಲ್ಲಿ ನುಗ್ಗಿ ಬಂದಿದ್ದ ಕಾರು ಬೈಕ್ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಹೊಡೆದಿರೋ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತರಾಗಿದ್ದಾರೆ.
ಅಪ್ರಾಪ್ತ ಬಾಲಕ ಚಾಲಕನಾಗಿದ್ದು, ಕಾರು ಸುಮಾರು 200 ಕಿಲೋ ಮೀಟರ್ ವೇಗದಲ್ಲಿತ್ತು.
ಬೆಳಗ್ಗಿನ ಜಾವದಲ್ಲಿ ಒಬ್ಬ ಯುವಕ ಮತ್ತು ಯುವತಿ ಬೈಕ್ನಲ್ಲಿ ನಿಧಾನಕ್ಕೆ ರಸ್ತೆಯ ಎಡಭಾದಲ್ಲಿ ಹೋಗ್ತಾ ಇರ್ತಾರೆ. ಹಿಂಬದಿಯಿಂದ ಶರವೇಗದಲ್ಲಿ ಬಂದಿರೋ ಪೋರ್ಶೆ ಕಾರು ಕಣ್ಣು ಮುಚ್ಚಿ ಬಿಡುವುದ್ರಲ್ಲಿ ರಭಸವಾಗಿ ಗುದ್ದಿ ಮುಂದೆ ಪಾಸಾಗುತ್ತೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರು ಸುಮಾರು 20 ಅಡಿ ಎತ್ತರಕ್ಕೆ ಹಾರಿ ರಸ್ತೆ ಮೇಲೆ ಬೀಳುತ್ತಾರೆ. ತಕ್ಷಣವೇ ಸ್ಥಳದಲ್ಲಿದ್ದ ಸ್ಥಳೀಯರು ಓಡೋಡಿ ಬರ್ತಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಆಸ್ಪತ್ರೆಗೆ ಸೇರಿಸೋ ಕೆಲ್ಸ ಮಾಡ್ತಾರೆ. ಆದ್ರೆ, ಇಬ್ಬರ ಪ್ರಾಣ ಪಕ್ಷಿ ಅದಾಗಲೇ ಹಾರಿಹೋಗಿತ್ತು. ಹೀಗೆ ಅಪಘಾತ ಮಾಡಿದ ಕ್ರೂರಿ ವೇದಾಂದ್ ಅಗರ್ವಾಲ್. ಈತ ಪುಣೆಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಬ್ರಹ್ಮ ರಿಯಾಲ್ಟಿಯ ಮಾಲೀಕ ವಿಶಾಲ್ ಅಗರ್ವಾಲ್ ಎಂಬುವರ ಪುತ್ರನಾಗಿದ್ದಾನೆ.
-ಪೊಲೀಸ್ ಅಧಿಕಾರಿ
ಭೀಕರ ಅಪಘಾತದಲ್ಲಿ ಟೆಕ್ಕಿಗಳಾಗಿರೋ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕಾಸ್ಟಾ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇಬ್ಬರು ಮಧ್ಯ ಪ್ರದೇಶದ ಮೂಲದವರಾಗಿದ್ದು, ಪುಣೆಯಲ್ಲಿ ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ರು. ಭಾನುವಾರ ಇವ್ರು ಪಾರ್ಟಿಯೊಂದರಲ್ಲಿ ಪಾಲ್ಗೊಂಡು ಅಲ್ಲಿಂದ ಮನೆಗೆ ಹೋಗ್ತಿದ್ರು. ಆ ಸಮಯದಲ್ಲಿ ಪೋರ್ಶೆ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದು ಪ್ರಾಣವನ್ನು ಬಲಿ ಪಡೆದಿದೆ. ಹಿಟ್ ಅಂಡ್ ರನ್ ದೃಶ್ಯಗಳು ಬೆಚ್ಚಿ ಬೀಳಿಸುವಂತಿವೆ. ಅಪಘಾತಕ್ಕೆ ಕಾರಣವಾಗಿದ್ದು, ಇಬ್ಬರು ಟೆಕ್ಕಿಗಳು ಜೀವ ಕಳೆದುಕೊಳ್ಳುವಂತೆ ಆಗಿದ್ದು ಅತೀ ವೇಗವಾಗಿ ಕಾರು ಓಡಿಸ್ಕೊಂಡ್ ಬಂದಿದ್ದು.
ಸುಮಾರು 200 ಕಿಲೋ ಮೀಟರ್ ವೇಗದಲ್ಲಿ ಕಾರು ಈ ಓಡಿಸಿಕೊಂಡು ಬಂದು ಗುದ್ದಿದ್ದಾರೆ. ಇದನ್ನು ಕಣ್ಣಾರೆ ಕಂಡಿರೋ ಸ್ಥಳೀಯರು ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಜನ ಆತನಿಗೆ ಚೆನ್ನಾಗಿ ಥಳಿಸಿದ ಮೇಲೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದ್ರೆ, ಜನ ಏನ್ ನಿರೀಕ್ಷೆ ಮಾಡಿದ್ರೋ ಅದಾಗಿಲ್ಲ. ಕಾರಣ ಎರಡು ಕೊಲೆ ಮಾಡಿದ ಆರೋಪಿಗೆ 15 ಗಂಟೆಯಲ್ಲಿಯೇ ಜಾಮೀನು ಮಂಜೂರಾಗಿದೆ. ಇಬ್ಬರಿಗೂ ಡಿಕ್ಕಿ ಹೊಡೆದ ನಂತರ ರಸ್ತೆ ಬದಿಯ ಫುಟ್ಪಾತ್ನ ರೈಲಿಂಗ್ಗೆ ಕಾರು ಡಿಕ್ಕಿ ಹೊಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವೊಂದು ಕಾಣಿಸಿಕೊಂಡಿದೆ. ಈ ವೇಳೆ ಅಪಘಾತಕ್ಕೀಡಾದ ಕಾರಿನಿಂದ ಹೊರತೆಗೆಯಲು ಮುಂದಾದ ಚಾಲಕನಿಗೆ ಜನರ ಗುಂಪೊಂದು ಥಳಿಸುತ್ತಿರುವುದು ಕಂಡು ಬಂದಿದೆ. ಹಿಟ್ ಅಂಡ್ ರನ್ ಕೇಸ್ ಇದೆ. ಇಬ್ಬರು ಅಮಾಯಕರು ಸಾವನ್ನಪ್ಪಿದ್ದಾರೆ.
ಹೀಗಿದ್ದಾಗ ಜಾಮೀನು ಸಿಕ್ಕಿದ್ದು ಹೇಗೆ ಅಂದ್ರೆ, ಆತ ಬಾಲಾಪರಾಧಿಯಾಗಿದ್ದಾನೆ. ಹೌದು, 17 ವರ್ಷ 8 ತಿಂಗಳು ಆಗಿರೋದ್ರಿಂದ ಆತನನ್ನು ಬಾಲಾಪರಾಧಿ ಅಂತಾ ಕೇಸ್ ದಾಖಲು ಮಾಡಲಾಗಿದೆ. ಇದೇ ಹಿನ್ನೆಲೆಯಲ್ಲಿ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಅಲ್ಲಿ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಷರತ್ತು ಬದ್ಧ ಜಾಮೀನು ಮಂಜೂರು ನೀಡಿದ್ದಾರೆ.
ಷರತ್ತು ನಂ.01: ಅಪಘಾತದ ಕುರಿತು ಪ್ರಬಂಧ ಬರೆಯಬೇಕು!
ಷರತ್ತು ನಂ.02: ಟ್ರಾಫಿಕ್ ಪೊಲೀಸ್ ವಿಭಾಗದಲ್ಲಿ 15 ದಿನ ಕೆಲಸ!
ಷರತ್ತು ನಂ.03: ಕುಡಿತ ಬಿಡೋ ಚಿಕಿತ್ಸೆಗೆ ಕೌನ್ಸೆಲಿಂಗ್ಗೆ ಹಾಜರಾಗಬೇಕು!
ಬಾಲಾಪರಾಧಿಗೆ ನ್ಯಾಯಾಧೀಶರು ವಿಧಿಸಿರೋ ನಂಬರ್ ಒನ್ ಷರತ್ತು ಅಪಘಾತದ ಕುರಿತು ಪ್ರಬಂಧ ಬರೆಯಬೇಕು. ಷರತ್ತು ನಂಬರ್ ಎರಡು ಯೆರವಾಜ ಟ್ರಾಫಿಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 15 ದಿನ ಟ್ರಾಫಿಕ್ ಪೊಲೀಸರ ಜೊತೆ ಕಾರ್ಯನಿರ್ವಹಿಸಬೇಕು. ಷರತ್ತು ನಂಬರ್ ಮೂರು, ಕುಡಿತದ ಚಟ ಬಿಡುವುದಕ್ಕಾಗಿ ಕೌನ್ಸೆಲಿಂಗ್ಗೆ ಹಾಜರಾಗಬೇಕು. ಇದು ನ್ಯಾಯಾಧೀಶರು ವಿಧಿಸಿರೋ ಷರತ್ತು. ಬಾಲಾಪರಾಧಿ ಆಗಿರೋ ಹಿನ್ನೆಲೆಯಲ್ಲಿ ಜಾಮೀನು ಸುಲಭವಾಗಿ ಸಿಕ್ಕಿದೆ. ಆದ್ರೆ, ಆಕ್ಸಿಡೆಂಟ್ ಮಾಡಿರೋ ಆರೋಪಿ ಪ್ರಭಾವಿ ಕುಟುಂಬವನು ಆಗಿದ್ದಾನೆ. ಆತನ ತಂದೆ ಪ್ರತಿಷ್ಠಿತ ಕಂಪನಿಯ ಬಿಲ್ಡರ್ ಆಗಿದ್ದಾರೆ. ಹೀಗಾಗಿ ಜಾಮೀನು ಸಿಕ್ಕಿದೆ ಅಂತಾ ಜನರು ಸಿಟ್ಟಿಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಆಕ್ರೋಶದ ಕಿಡಿಯನ್ನು ಹೊರಹಾಕ್ತಿದ್ದಾರೆ.
ದೇಶದ ಕಾಯ್ದೆ ಕಾನೂನು ಬಗ್ಗೆ ಗೌರವ ಬರುತ್ತೆ. ಆದ್ರೆ, ಕೆಲವು ಸಂದರ್ಭದಲ್ಲಿ ಜನರಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡುವುದೇ ಕಾನೂನು. ಹೌದು, ಪುಣೆ ಹಿಟ್ ಅಂಡ್ ರನ್ ಕೇಸ್ನಲ್ಲಿ ಆಗ್ತಾ ಇರೋದು ಅದೇ ನೋಡಿ. ಆಕ್ಸಿಡೆಂಟ್ ಮಾಡಿ ಇಬ್ಬರ ಸಾವಿಗೆ ಕಾರಣವಾಗಿದ್ದ ವ್ಯಕ್ತಿ ಬಿಲ್ಡರ್ ಪುತ್ರ. ಆತ 2ನೇ ಪಿಯುಸಿಯಾಗಿದ್ದು, ಆತನ ವಯಸ್ಸು 17 ವರ್ಷ 8 ತಿಂಗಳು. ವಯಸ್ಕರ ಅಂತಾ ತೀರ್ಮಾನಿಸಲು 2 ತಿಂಗಳು ಅಷ್ಟೇ ಬಾಕಿ. ಆತನ ಬಳಿ ಡ್ರೈವಿಂಗ್ ಲೆಸೆನ್ಸ್ ಕೂಡ ಇಲ್ಲ. ಹೀಗಾಗಿ ಬಾಲಾಪರಾಧಿ ನ್ಯಾಯಾಲಯದಲ್ಲಿ ಸುಲಭವಾಗಿ ಜಾಮೀನು ಸಿಕ್ಕಿದೆ.
ಅಪರಾಧದ ಭೀಕರತೆಯನ್ನು ಪರಿಗಣಿಸಿ ಜಾಮೀನು ನಿರಾಕರಣೆ ಮಾಡ್ಬೇಕಿತ್ತು ಅನ್ನೋದ್ ಜನರ ಆಕ್ರೋಶ. ಅದ್ರಲ್ಲಿಯೂ ಅಪರಾಧಿಗೆ ಪ್ರಬಂಧ ಬರೆಯೋ ಶಿಕ್ಷೆ ಕೊಟ್ಟಿರೋದು, ಟ್ರಾಫಿಕ್ ಪೊಲೀಸರ ಜೊತೆ ಕೆಲ್ಸ ಮಾಡಲು ಆದೇಶ ನೀಡಿರೋದು ಜನರಲ್ಲಿದ್ದ ಆಕ್ರೋಶ ಕಿಡಿ ಇನ್ನಷ್ಟು ಧಗಧಗಿಸುವಂತೆ ಮಾಡಿ ಬಿಟ್ಟಿದೆ.
ಬಾಲಾಪರಾಧಿಯಾಗಿರ್ಬಹುದು. ಆದ್ರೆ, ಆತ ಮಾಡಿದ ಕೃತ್ಯವನ್ನು ಯಾರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆತನ ಎರಡು ಪಬ್ ಗೆ ಹೋಗಿ ಡ್ರಿಂಗ್ಸ್ ಮಾಡಿದ್ದು. ಬಿಲ್ ಬರೋಬ್ಬರಿ 48 ಸಾವಿರವಾಗಿತ್ತು. ಆತ ಬಾರ್ನಲ್ಲಿ ಕುಳಿತುರೋದು, ಬಿಲ್ ಕಟ್ಟಿರೋದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾಲಾಪರಾಧಿ ಕಾಯ್ದೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೌದು, ಪ್ರಭಾವಿ ಬಿಲ್ಡರ್ ಪುತ್ರನಾಗಿರೋ ವೇದಾಂತ್ಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಕೊಟ್ಟಿದ್ದಾರೆ. ಪಿಜ್ಜಾ ಬರ್ಗರ್ ಕೊಡಿಸಿದ್ದಾರೆ. ಅನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಇದು ಕೂಡ ಸಾರ್ವಜನಿಕ ವಲಯದಲ್ಲಿ ದೊಡ್ಡ ಪ್ರಮಾಣದ ಟೀಕೆಗೆ ಕಾರಣವಾಗಿದೆ.