ಸುಳ್ಯ : ಯುವತಿಯೋರ್ವಳು ಕಂಪ್ಯೂಟರ್ ಕ್ಲಾಸ್ ಮುಗಿಸಿ ತೆರಳುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಬಂದ ಯುವಕನೋರ್ವ ಐ.ಲವ್.ಯು ಹೇಳಿರುವುದಾಗಿ ಆರೋಪಿಸಿ ನೀಡಿರುವ ದೂರಿನ ಮೇರೆಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಮೇ.21 ರಂದು ಸುಳ್ಯದಲ್ಲಿ ಕಂಪ್ಯೂಟರ್ ಕ್ಲಾಸ್ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಸುಳ್ಯ ತಾಲೂಕು ಆಲೆಟ್ಟಿ ಕ್ರಾಸ್ ಬಳಿ ಹೋಗುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಐ ಲವ್ ಯು ಎಂದು ಹೇಳಿದ್ದು, ಯುವತಿ ಯಾವುದೇ ಪ್ರತಿಕ್ರಿಯೆ ನೀಡದೇ, ತಂದೆಗೆ ವಿಷಯ ತಿಳಿಸಿ ನಂತರ ಠಾಣೆಗೆ ಬಂದು ದೂರು ನೀಡಿದ್ದು, ಆರೋಪಿಯನ್ನು ನೋಡಿದರೆ ಗುರುತಿಸುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಐಪಿಸಿ 1860 (U/S-354(D) ರಂತೆ ಪ್ರಕರಣ ದಾಖಲಾಗಿದೆ.


























