ಬೆಂಗಳೂರು : ಹೈಕೋರ್ಟ್ ವಕೀಲೆ ಚೈತ್ರಾ ಗೌಡ ಸಾವಿನ ರಹಸ್ಯವನ್ನು ಪೊಲೀಸರು ಭೇದಿಸಿದ್ದು, ತಾವಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದು ತನಿಖೆಯಿಂದ ದೃಢವಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಡೆತ್ ಸೀಕ್ರೆಟ್ ರಿವೀಲ್ ಆಗಿದೆ. ಡೆತ್ ನೋಟ್ ಪರಿಶೀಲನೆ, ಮರಣೋತ್ತರ ಪರೀಕ್ಷೆಯಲ್ಲಿ ಚೈತ್ರಾ ಗೌಡ ಆತ್ಮಹತ್ಯೆಮಾಡಿಕೊಂಡಿರುವುದು ದೃಢವಾಗಿದೆ. ಡೆತ್ನೋಟ್ ಅನ್ನು ಎಫ್ ಎಸ್ಎಲ್ಗೆ ಕಳುಹಿಸಿದ್ದರು. ಎಫ್ಎಸ್ಎಲ್ ವರದಿಯಲ್ಲಿ ಡೆತ್ ನೋಟ್ನಲ್ಲಿರುವ ಬರವಣಿಗೆ ಚೈತ್ರಾ ಅವರದ್ದೇ ಎಂಬುವುದು ದೃಢವಾಗಿದೆ. ಅಲ್ಲದೆ ಅವರು ಖಿನ್ನತೆಯಿಂದ ಬಳಲುತ್ತಿದ್ದು ಸಹ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಕೆಎಸ್ ಅಧಿಕಾರಿಯ ಪತ್ನಿಯೂ ಆಗಿದ್ದ ಚೈತ್ರಾ ಗೌಡ., ಮೇ 11 ರಂದು ಸಂಜಯನಗರ ಠಾಣಾ ವ್ಯಾಪ್ತಿಯ ತಮ್ಮ ಅಪಾರ್ಟ್ಮೆಂಟ್ನಲ್ಲಿ ನೇಣಿಗೆ ಶರಣಾಗಿದ್ದರು. ಚೈತ್ರಾ ಪತಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಲ್ಲಿ (ಕೆಐಡಿಬಿ) ಅಸ್ಟಿಸೆಂಟ್ ಕಮಿಷನರ್ ಆಗಿದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿದ್ದ ಇವರು, ಪ್ರವೃತ್ತಿಯಲ್ಲಿ ಮಾಡೆಲ್ ಆಗಿದ್ದರು.


























