ಮದುವೆ ಸಮಾರಂಭದಲ್ಲಿ ವಧು-ವರರಿಗೆ ಉಡುಗೊರೆಗಳನ್ನು ನೀಡುವುದು ಮಾಮೂಲಿ ಆದರೇ ಇಲ್ಲೊಂದು ಕುಟುಂಬದಲ್ಲಿ ಮದುವೆಯಲ್ಲಿ ಸಮಾರಂಭಕ್ಕೆ ಆಗಮಿಸಿದ ಹಿರಿಯರನ್ನು ಗೌರವಿಸುವ ಮೂಲಕ ಮಾದರಿಯಾಗಿದ್ದಾರೆ.

ಕೇರಳದ ಎಡವನ್ನದಲ್ಲಿ VK ಕಲ್ಲಂಗಳ ಕುಟುಂಬದ ಮದುವೆ ಸಮಾರಂಭ ನೆರವೇರಿದ್ದು, VK ಕುಟುಂಬದ ಸಫಿಯಾ ವಿ.ಕೆ ರವರ ಮಗಳು ಝೈನಬೆತ್ ಅಮ್ನ ಅವರ ಮದುವೆ ಕಾರ್ಯಕ್ರಮದಲ್ಲಿ ಹಲವು ಹಿರಿಯರಿಗೆ ಸ್ಮರಣಿಕೆ ನೀಡುವ ಮೂಲಕ ಅವರನ್ನು ಗೌರವಿಸಲಾಯಿತು.
ಅಬುಲ್ ಸತಾರ್, ಅನ್ವರ್, ರಹಿಮಾನ್ ಕಲ್ಲಂಗಳ, ರುಕಿಯಾ ಕೇಪು, ಖದೀಜಾ, ಹಲೀಮಾ, ಸಲೀ ಕೇಪು ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.