ವಿಟ್ಲ : ಶ್ರೀದೇವಿ ಯುವಕ ಸಂಘ ಸೆರ್ಕಳ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮವು ಸೆರ್ಕಳ ಶ್ರೀ ಮಹಮ್ಮಾಯಿ ಅಮ್ಮನವರ ಸನ್ನಿಧಿಯಲ್ಲಿ ನಡೆಯಿತು.
ಒಟ್ಟು 31 ವಿದ್ಯಾರ್ಥಿಗಳು ಪುಸ್ತಕವನ್ನು ಪಡೆದುಕೊಂಡರು. ಅತಿಥಿಗಳಾಗಿ ಆಗಮಿಸಿದ ಸ್ಕೈವೇ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಶಶಿಧರ್ ಕೆ ಕಾಡುಮಠ, ನಿವೃತ್ತ ಸೈನಿಕರಾಗಿರುವ ಗೋಪಾಲಕೃಷ್ಣ ಭಟ್ ಮಾದಕಟ್ಟೆ, ಹಿಂದೂ ಮುಖಂಡರಾಗಿರುವ ಅಕ್ಷಯ್ ರಜಪೂತ್ ಹಾಗೂ ಮಕ್ಕಳ ಪೋಷಕರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುಸ್ತಕ ವಿತರಣೆಗೆ ಕೈ ಜೋಡಿಸಿದ ಸಂಘ ಮಿತ್ರರು ಎಡನೀರು ಇವರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.