ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಎಚ್.ಡಿ ರೇವಣ್ಣ ಭೇಟಿ ನೀಡಿದ್ದಾರೆ.
ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ನಿನ್ನೆ ರಾತ್ರಿಯೇ ಧರ್ಮಸ್ಥಳಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು.
ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ರೇವಣ್ಣ ಅವರು ಸಂಕಷ್ಟ ನಿವಾರಣೆಗಾಗಿ ಮಂಜುನಾಥನ ಮೊರೆ ಹೋಗಿದ್ದಾರೆನ್ನಲಾಗಿದೆ.
ಹಲವು ಪ್ರಮುಖ ದೇವಸ್ಥಾನಗಳಿಗೆ ಈಗಾಗಲೇ ಹೆಚ್.ಡಿ ರೇವಣ್ಣ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.