ಕಡಬ : ಕೃಷಿ ಜಾಗದಲ್ಲಿ ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿದ್ದಾಗ ತಂಡವೊಂದು ಬಂದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.
ಕಡಬ ತಾಲೂಕು ನೂಜಿಬಾಳ್ತಿಲ, ಸಾಂತ್ಯಡ್ಕ ನಿವಾಸಿ ಸತ್ಯನಾರಾಯಣ ಎಸ್.ಹೆಚ್. ಎಂಬವರು ನೀಡಿದ ದೂರಿನ ಮೇರೆಗೆ ವಿಲ್ಪ್ರೆಡ ರೋಡ್ರಿಗಸ್, ಸೈಮನ್ ಲೂಯಿಸ್ ರೋಡ್ರಿಗಸ್, ರಶೀದ ಹಳೇಸ್ಟೇಷನ್, ಧನಂಜಯ, ರವಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಸತ್ಯನಾರಾಯಣ ಎಸ್.ಹೆಚ್ ರವರು ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಮಾಲೇಶ್ವರ ಕುಂಡಲಿ ಎಂಬಲ್ಲಿ ಜಮೀನು ಹೊಂದಿದ್ದು, ಸದ್ರಿ ಜಾಗವನ್ನು ನೆಲಸಮತಟ್ಟುಗೊಳಿಸಿ, ಅದರಲ್ಲಿ ನಿವೇಶನವನ್ನು ನಿರ್ಮಿಸಿದ್ದು, ಮೇ.25 ರಂದು ಬೆಳಗ್ಗೆ ಸತ್ಯನಾರಾಯಣ ಅವರು ಕೃಷಿ ಮಾಡುವ ಹಿನ್ನೆಲೆ ಜೆ.ಸಿ.ಬಿ ವಾಹನದಲ್ಲಿ ಕೆಲಸ ಮಾಡಿಸುತ್ತಿದ್ದಾಗ, ವಿಲ್ಪ್ರೆಡ ರೋಡ್ರಿಗಸ್, ಸೈಮನ್ ಲೂಯಿಸ್ ರೊಡ್ರಿಗಸ್, ರಶೀದ ಹಳೇಸ್ಟೇಷನ್, ಧನಂಜಯ, ರವಿ ಮತ್ತು ಇತರರು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಬಳಿಕ ಸತ್ಯನಾರಾಯಣ ಹಾಗೂ ಹಿಟಾಚಿ ಆಪರೇಟರ್ ಪ್ರಕಾಶ್ ರವರಿಗೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.