ಪುತ್ತೂರು : ಒಳಮೊಗ್ರು ಗ್ರಾಮದ ಕೈಕಾರದಲ್ಲಿ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ.
ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ ಶುಭೋದಯ ಹಲ್ಲೆಗೊಳಗಾದವರು.
ಮನೆಗೆ ದಿನಸಿ ತರಲೆಂದು ಕೈಕಾರ ಜಂಕ್ಷನ್ ಗೆ ತೆರಳಿ ಖರೀದಿಸಿ ವಾಪಸ್ಸು ಮನೆ ಕಡೆಗೆ ಹೋಗುತ್ತಿರುವಾಗ, ಒಳಮೊಗರು ಗ್ರಾಮದ ಕೈಕಾರ ಸರಕಾರಿ ಶಾಲೆಯ ಬಳಿ ಪರಿಚಯದ ರವೀಂದ್ರ ನಾಯ್ಕರವರು ಹಳೆಯ ದ್ವೇಷದಿಂದ ಅವಾಚ್ಯವಾಗಿ ಬೈದು, ಕೈಯ್ಯಲ್ಲಿದ್ದ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಅಕ್ಕನ ಗಂಡ ಶೇಖರ್ ಎಂಬವರು ಬರುವುದನ್ನು ನೋಡಿ ಹಲ್ಲೆ ನಡೆಸಿದ ರವಿಂದ್ರ ನಾಯ್ಕ ಜೀವಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ ಎಂದು ಶುಭೋದಯ ಅವರು ಆರೋಪಿಸಿದ್ದಾರೆ.
ಘಟನೆ ಕುರಿತು ಸಂಪ್ಯ ಪೊಲೀಸರು ಕಲಂ 324 504 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

























