ಪುತ್ತೂರು : ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸುಮಾರು 39 ವರುಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಸುನೀತಾ ಎಂ ರವರಿಗೆ ಬೀಳ್ಕೊಡುಗೆ (ವಿದಾಯ) ಸಮಾರಂಭ ಮೇ. 31 ರಂದು ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರುಗಲಿದೆ.
ಸುನೀತಾ ಎಂ. ರವರು ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯಿಂದ ಅತ್ಯುತ್ತಮ ಗೈಡ್ ಶಿಕ್ಷಕಿಯಾಗಿ ಮೇಡಲ್ ಆಫ್ ಮೆರಿಟ್ ಮತ್ತು ಬಾರ್ ಟು ಮೆಡಲ್ ಆಫ್ ಮೆರಿಟ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.


























