ಪುತ್ತೂರು : ಎಂ.ಎಲ್.ಸಿ. ಚುನಾವಣೆಗೆ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದ್ದು, ನೈರುತ್ಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ. ಮೈತ್ರಿಕೂಟದ ಅಭ್ಯರ್ಥಿ ಎಸ್.ಎಲ್ ಭೋಜೇಗೌಡ ಅವರ ಪರ ಅರುಣ್ ಕುಮಾರ್ ಪುತ್ತಿಲ ಬಿರುಸಿನ ಪ್ರಚಾರ ನಡೆಸಿದರು.


ಪುತ್ತೂರಿನ ಹಲವು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮತಪ್ರಚಾರ ನಡೆಸಿದರು.


ಶಿಕ್ಷಣ ಸಂಸ್ಥೆಗಳ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರೊಂದಿಗೆ ಹಾಗೂ ವಕೀಲರ ಬಳಿ ಸಂವಾದ ನಡೆಸಿದರು.

ಹಲವು ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು.










