ಪುತ್ತೂರು : ಕೃಷಿಕರಿಗೆ ಅಗ್ರೋ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವರಿಗೆ ಅಪರಿಚಿತನೋರ್ವ ಲಕ್ಷಾಂತರ ರೂ. ವಂಚನೆ ಮಾಡಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರಿಮೊಗರು ನಿವಾಸಿ ಗಣೇಶ್ ಪ್ರಭು ವಂಚನೆಗೊಳಗಾದವರು.
ಗಣೇಶ್ ಪ್ರಭು ರವರು ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ, ಅಗ್ರೋ ಉತ್ಪನ್ನಗಳನ್ನು ಕೃಷಿಕರಿಗೆ ಮಾರಾಟ ಮಾಡುತ್ತಿದ್ದು, Unity Poly Barrels PVT Ltd Ashoka Nagar Shivaji Nagar Pune Maharsasthra ಎಂಬ ಹೆಸರಿನಿಂದ ಸಂಪರ್ಕಿಸಿದ ಅಪರಿಚಿತನೋರ್ವ ಆನ್ ಲೈನ್ ಮುಖಾಂತರ ಡ್ರಮ್ ಉತ್ಪನ್ನಗಳನ್ನು ಮಾರಾಟ ಮಾಡುತ್ತೇನೆಂದು 08.05.2024 ರಿಂದ 10.05.2024ರ ಅವಧಿಯಲ್ಲಿ, 1,30,500 ರೂ. ಹಣವನ್ನು ಮೂರು ಹಂತಗಳಲ್ಲಿ ಫೋನ್ ಪೇ ಮೂಲಕ ಹಾಕಿಸಿಕೊಂಡು ಈವರೆಗೆ ಡ್ರಮ್ ಮೆಟಿರಿಯಲ್ ಗಳನ್ನು ಕಳುಹಿಸಿಕೊಟ್ಟಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತಾಗಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ:58/2024, ಕಲಂ: 420 ಭಾ.ದಂ.ಸಂ ಮತ್ತು ಕಲಂ:-66(c),66(D))IT ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.