ಮೈಸೂರು : ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ಯುವಕನ ಬರ್ಬರ ಕೊಲೆ ನಡೆದಿದ್ದು, ಇಡೀ ಮೈಸೂರೇ ಬೆಚ್ಚಿ ಬೀಳುವಂತಿದೆ.
ಅರ್ಬಾಜ್ ಖಾನ್ (18) ಕೊಲೆಯಾದ ಯುವಕ.
ಕಾರಣ ಏನು..?
ಸಾಯುವುದಕ್ಕೂ ಮುನ್ನ ಯುವಕನ ಕೊನೆ ಕ್ಷಣದ ವೀಡಿಯೋ ವೈರಲ್ ಆಗಿದ್ದು, ಅದು ಭಯ ಹುಟ್ಟಿಸುತ್ತಿದೆ. ಗುರಾಯಿಸಿದ್ದಕ್ಕೆ ಯುವಕರ ನಡುವೆ ಗಲಾಟೆ ಆಗಿದೆ. ಇದು ವಿಕೋಪಕ್ಕೆ ತಿರುಗಿ ನಾಲ್ವರು ಯುವಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಪರಸ್ಪರ ಗಲಾಟೆಯಲ್ಲಿ ಪ್ರಮುಖ ಆರೋಪಿ ಶಹಬಾಜ್‌ಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿದ ಎಂದು ಗಲಾಟೆ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.