ಉಜಿರೆ: ಶ್ರೀ ಧರ್ಮಸ್ಥಳ ಕ್ರೀಡಾ ವಸತಿ ನಿಲಯದಲ್ಲಿ ವಾಸ್ತವ್ಯವಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಾಪತ್ತೆಯಾಗಿದ್ದು ಮೇ 30ರಂದು ವರದಿಯಾಗಿದೆ.

ಉಜಿರೆ ಶ್ರೀ ಧರ್ಮಸ್ಥಳ ಕ್ರೀಡಾ ವಸತಿ ನಿಲಯ ಸಹಾಯಕ ನಿಲಯ ಪಾಲಕಿ ರವರ ದೂರಿನಂತೆ ಉಜಿರೆಯಲ್ಲಿ ವಾಸ್ತವ್ಯದಲ್ಲಿರುವ ವಿದ್ಯಾರ್ಥಿ ದಿವ್ಯಾ ಎಸ್, ದೇವಾಂಗ ರಸ್ತೆ, ಕಸಬಾ ಹೋಬಳಿ, ಬೇಲೂರು ಕಸಬಾ, ಬೇಲೂರು ತಾಲೂಕು, ಹಾಸನ ಜಿಲ್ಲೆ ಎಂಬವರು ಶ್ರೀ ಧರ್ಮಸ್ಥಳ ಪದವಿ ಪೂರ್ವ ಕಾಲೇಜು ಉಜಿರೆಯಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದು, ಮೇ 29ರಂದು ಬೆಳೆಗ್ಗೆ 8 ಗಂಟೆ ಸಮಯಕ್ಕೆ ಕ್ರೀಡಾಂಗಣಕ್ಕೆ ಹೋಗಿ ಬರುತ್ತೇನೆ ಎಂದು ನಿಲಯ ಪಾಲಕಿಯಲ್ಲಿ ಅನುಮತಿ ಪಡೆದುಕೊಂಡು ಹೋದವಳು, ಹಾಸ್ಟೇಲ್ ಗೂ ವಾಪಸ್ಸು ಬರದೇ, ಕಾಲೇಜಿಗೂ ಹೋಗದೇ, ಮನೆಗೂ ಹೋಗದೇ ನಾಪತ್ತೆಯಾಗಿದ್ದಾರೆ.