ವಿಟ್ಲ : ಸಂಬಂಧಿಕರೊಂದಿಗೆ ಸೇರಿ ಸಹೋದರನಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದಲ್ಲಿ ನಡೆದಿದೆ.
ಶಿವಪ್ಪ ಗೌಡ (70) ನೀಡಿದ ದೂರಿನಂತೆ ಸಹೋದರಿ ಇಂದಿರಾ ಹಾಗೂ ಸಂಬಂಧಿಕರಾದ ಶುಶೀಲಾ, ದರ್ಣಪ್ಪ ಗೌಡ , ಯಮುನಾ ಹಾಗೂ ಗಂಗಾಧರ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಪ್ಪ ಅವರ ಸಹೋದರಿ ಇಂದಿರಾ ರವರು ಸಂಬಂಧಿಕರೊಂದಿಗೆ ಸೇರಿಕೊಂಡು ಶಿವಪ್ಪ ಅವರು ಬೆಳೆದ ಅಡಿಕೆಯನ್ನು ಮಾಣಿ ಕ್ಯಾಂಪ್ಕೋ ಸಂಸ್ಥೆಗೆ ಮಾರಾಟ ಮಾಡಿ ಶಿವಪ್ಪ ರವರ ಹೆಸರಿನಲ್ಲಿ ನಕಲಿ ಉಳಿತಾಯ ಖಾತೆಯನ್ನು ತೆರೆದು ಇಲ್ಲಿಯವರೆಗೆ 51 ಲಕ್ಷ ಹಣವನ್ನು ಅವರ ಖಾತೆಗೆ ವರ್ಗಾಯಿಸಿ ವಂಚಿಸಿದ್ದಾರೆ.
ಅಲ್ಲದೇ ತಾಯಿಯ ನಕಲಿ ಸಹಿ ಹಾಕಿ ತಾಯಿಯ ಹೆಸರಿನಲ್ಲಿರುವ 6.92 ಎಕ್ರೆ ಜಮೀನನ್ನು ತಮ್ಮ ಹೆಸರಿಗೆ ವರ್ಗಾಯಿಸಿದ್ದಾರೆಂದು ಮತ್ತು ಇದನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಮೇಲೆ ಅ.ಕ್ರ 97/2024 ಕಲಂ 417,420,506,R/w 34 IPC ರಂತೆ ಪ್ರಕರಣ ದಾಖಲಾಗಿದೆ.