ಚಿತ್ರದುರ್ಗ : ಅಪ್ರಾಪ್ತ ಬಾಲಕಿ ಮೇಲೆ ಮೌಲ್ವಿಯೊಬ್ಬರು ಕೆಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಪ್ರಕರಣ ಚಿತ್ರದುರ್ಗ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
ಕಳೆದ ಮೂರು ವರ್ಷಗಳಿಂದ ಬಾಲಕಿಯೊಬ್ಬಳು ಕುರಾನ್ ಪಠಿಸಲು ಮಸೀದಿಗೆ ಹೋಗುತ್ತಿದ್ದರು. ಕುರಾನ್ ಪಠಿಸಲು ಹೋಗುತ್ತಿದ್ದ ಬಾಲಕಿ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದೆ. ಕಳೆದ ಮೇ 31ರಂದು ಈ ಘಟನೆ ಬೆಳಕಿಗೆ ಬಂದಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮೌಲ್ವಿಯನ್ನು ಬಂಧನ ಮಾಡಲಾಗಿದೆ.
ಆರೋಪಿ ಹಜರತ್ ಮೌಲ್ವಿ ಎಂಬುವವರು ಬಾಲಕಿಗೆ ಗಾಳಿ ಸೋಕಿದೆ. ಬಾಲಕಿಗೆ ದೆವ್ವ ಮೆಟ್ಟಿದೆ. ಬಾಲಕಿಯ ದೇಹದಿಂದ ದೆವ್ವ ಓಡಿಸಲು ಪೂಜೆ ಮಾಡಬೇಕು ಎಂದು ಹೇಳಿದ್ದರು. ದೈಹಿಕ ಸುಖ ಕೊಟ್ರೆ ದೆವ್ವ ದೂರವಾಗುತ್ತೆ ಅಂತ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

























