ಗಾಂಧಿ ನಗರ : ಅಮಿತ್ ಶಾ 5 ಲಕ್ಷಗಳ ಮತದ ಅಂತರದಲ್ಲಿ ಗುಜರಾತ್ನ ಗಾಂಧಿ ನಗರ ಕ್ಷೇತ್ರದಿಂದ ಭಾರೀ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸೋನಾಲ್ ಪಟೇಲ್ ಅವರು ಅಮಿತ್ ಶಾ ಮುಂದೆ ಸ್ಪರ್ಧಿಸಿದರು. 2014ರಲ್ಲಿ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಈ ಕ್ಷೇತ್ರದಿಂದ ಸ್ವರ್ಧಿಸಿದರು. ಇದಕ್ಕೂ ಮೊದಲು 1996ರಲ್ಲಿ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಕೂಡ ಈ ಕ್ಷೇತ್ರದಿಂದ ಸ್ವರ್ಧಿಸಿ ಗೆಲುವು ಸಾಧಿಸಿದ್ದರು.


























