ವಿಟ್ಲ : ಹಳೆಯ ದ್ವೇಷದಿಂದ ಚಿಕ್ಕಪ್ಪನ ಮಗ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಕೇಪು ಗ್ರಾಮದ ಕೆ. ಗಣೇಶ್ ಎಂಬವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ.
ಜೂ.3ರಂದು ರಾತ್ರಿ ಕೇಪು ಗ್ರಾಮದ ಬಡೆಕೋಡಿ ಎಂಬಲ್ಲಿ ಮನೆಯ ಬಳಿಯಿದ್ದಾಗ, ಚಿಕ್ಕಪ್ಪನ ಮಗ ಚಂದ್ರ ಯಾನೆ ಚಂದ್ರಹಾಸ ಯಾವುದೋ ಹಳೆಯ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು, ಕೊಲ್ಲುವ ಉದ್ದೇಶದಿಂದ ಕೋಳಿ ಬಾಳ್‌ನಿಂದ ಹಲ್ಲೆ ನಡೆಸಿರುತ್ತಾನೆ. ಆ ವೇಳೆ ಪತ್ನಿ ಹಾಗೂ ತಾಯಿ ಬರುವುದನ್ನು ಕಂಡ ಚಂದ್ರಹಾಸ, ಜೀವ ಬೆದರಿಕೆ ಒಡ್ಡಿ ಪರಾರಿಯಾಗಿರುತ್ತಾನೆ ಎಂದು ಗಣೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ (ಅ.ಕ್ರ. 98/2024) ಕಲಂ 504, 324, 341, 307,506 ಐಪಿಸಿರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

























