ಯಾವುದೇ ಸಂಬಂಧದಲ್ಲಿ ಪರಸ್ಪರ ನಂಬಿಕೆ ತಳಹದಿಯಾಗಿರುತ್ತದೆ. ಒಂದು ಸಲ ನಂಬಿಕೆ ಒಡೆದು ಹೋದರೆ ಆ ಸಂಬಂಧವು ಕೂಡ ಮುರಿದು ಬೀಳುತ್ತದೆ. ಇದೀಗ ಅಂತದ್ದೇ ಘಟನೆಯೊಂದು ನಡೆದಿದೆ. ಡಿಎನ್‌ಎ ಪರೀಕ್ಷೆಯ ನಂತರ 18 ವರ್ಷದ ಸಂಬಂಧವನ್ನು ಸಂಪೂರ್ಣವಾಗಿ ಮುರಿದುಬಿದ್ದಿದೆ.
ಹೆಂಡತಿ ಮೋಸ ಮಾಡಿದ ಕಾರಣ ಪತಿ ಹೆಂಡತಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಾನೆ. ಈ ಕಥೆಯನ್ನು ಸ್ವತಃ ಆ ವ್ಯಕ್ತಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾನೆ. ನಾನು ನನ್ನ ಹೆಂಡತಿಯನ್ನು ಸುಮಾರು ಇಪ್ಪತ್ತು ವರ್ಷಗಳಿಂದ ತಿಳಿದಿದ್ದೇನೆ. ನಮಗೆ ಇಬ್ಬರು ಅವಳಿ ಮಕ್ಕಳಿದ್ದಾರೆ ಮತ್ತು ನಾನು ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ. ಆದರೆ, ಈ ಪ್ರೀತಿಯನ್ನು ಪರೀಕ್ಷಿಸಲು ನಾನು ನನ್ನ ಮಕ್ಕಳ ಡಿಎನ್‌ಎ ಪರೀಕ್ಷೆಯನ್ನು ಮಾಡಿದಾಗ, ನನಗೆ ತುಂಬಾ ಆಶ್ಚರ್ಯವಾಯಿತು ಏಕೆಂದರೆ ವರದಿಯಲ್ಲಿ ಏನಾಯಿತು ಎಂದು ತಿಳಿದ ನಂತರ, ನಾನು ಆಘಾತಕೊಳ್ಳಗಾದೆ ಎಂದು ಬರೆದುಕೊಂಡಿದ್ದಾನೆ.
ವರದಿ ಪ್ರಕಾರ, ನನ್ನ ಮಕ್ಕಳ ನಿಜವಾದ ತಂದೆ ನಾನಲ್ಲ, ಅವರ ತಂದೆ ಬೇರೆಯವರು. ಈ ಸತ್ಯ ತಿಳಿದ ನಂತರ ನನಗೆ ತುಂಬಾ ಆಘಾತವಾಯಿತು. ಎಷ್ಟೋ ದಿನಗಳಿಂದ ಹೆಂಡತಿಯಿಂದ ಅಂತರ ಕಾಯ್ದುಕೊಂಡಿದ್ದ ನಾನು ಒಂದು ದಿನ ಈ ವಿಚಾರವನ್ನು ಕೇಳಿದೆ, ಹೌದು ಈ ಮಕ್ಕಳು ನಿನ್ನದಲ್ಲ ಎಂದು ಹೇಳಿಕೊಂಡಿದ್ದಾಳೆ.
ಇದನ್ನು ತಿಳಿದ ನಂತರ ನಾನು ನಮ್ಮ ಸಂಬಂಧವನ್ನು ಸಂಪೂರ್ಣವಾಗಿ ಕೊನೆಗೊಳಿಸಿದೆ ಎಂದು ಪತಿ ಬರೆದಿದ್ದಾನೆ. ಈ ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಬ್ಬ ಬಳಕೆದಾರ, “ಗಂಡ ಹೆಂಡತಿಯ ನಡುವಿನ ಸಂಬಂಧವು ನಂಬಿಕೆಯ ತಳಹದಿಯ ಮೇಲೆ ನಿಂತಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು, “ಜೀವನದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸದಿರುವುದೇ ಉತ್ತಮ” ಎಂದು ಬರೆದುಕೊಂಡಿದ್ದಾರೆ.


























