ಇಂದು ಚಂಡೀಗಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಅಧಿಕಾರಿ ಬಿಜೆಪಿ ನೂತನ ಸಂಸದೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸಿಐಎಸ್ಎಫ್ ಅಧಿಕಾರಿ ಕುಲ್ವಿಂದರ್ ಕೌರ್ ಎಂಬುವವರು ತನಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಕಂಗನಾ ವಿಡಿಯೋ ಮಾಡುವ ಮೂಲಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಚಂಡೀಗಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏನಾಯಿತು ಎಂಬುವುದರ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ನೀಡಿದ್ದಾರೆ. ನಟಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ನನಗೆ ಸಾಕಷ್ಟು ಜನರಿಂದ ಕರೆಗಳು ಬರುತ್ತೀವೆ. ನಾನು ಆರಾಮಾಗಿದ್ದೇನೆ. ಇಂದು ಚಂಡೀಗಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ.
ನಾನು ಆಗ ತಾನೇ ಸೆಕ್ಯೂರಿಟಿ ಎಲ್ಲಾ ಚೆಕ್ ಮಾಡಿದ ಮೇಲೆ ನಾನು ಹೋದೆ. ಆಗ ಅಲ್ಲೇ ನಿಂತುಕೊಂಡಿದ್ದ ಸಿಐಎಸ್ಎಫ್ ಅಧಿಕಾರಿಯೊಬ್ಬರು ನನಗೆ ಕಪಾಳಕ್ಕೆ ಹೊಡೆದಿದ್ದಾರೆ. ಆಗ ನಾನು ಏಕೆ ಹೀಗೆ ಮಾಡಿದ್ದೀರಿ ಅಂತ ಕೇಳಿದೆ. ಆಗ ಅವರು ನಾನು ರೈತರ ಪರ ಹೋರಾಟ ಮಾಡುತ್ತಿದ್ದೇನೆ ಅಂತ ಹೇಳಿದ್ರು. ಪಂಜಾಬ್ನಲ್ಲಿ ಆತಂಕವಾದಿ (ಭಯೋತ್ಪಾದನೆ) ಮತ್ತು ಹಿಂಸಾಚಾರ ಹೆಚ್ಚಾಗುತ್ತಿದೆ. ಇದನ್ನು ತಡೆಯೋದರ ಬಗ್ಗೆ ನಾವು ಯೋಚಿಸಬೇಕಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ನಟಿ ಕಂಗನಾ ರಣಾವತ್ ಶೇರ್ ಮಾಡಿಕೊಂಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


























