ಪುತ್ತೂರು : ಕೆಯ್ಯೂರು ಗ್ರಾಮದ ತೆಗ್ಗು ಎರೆಕಲಾ ಎಂಬಲ್ಲಿ ಕಾಡಾನೆ ಸಂಚರಿಸಿದ್ದು, ಸ್ಥಳಕ್ಕೆ ಮಾಜಿ ಶಾಸಕರಾದ ಸಂಜೀವ ಮಠoದೂರು ಭೇಟಿ ಅರಣ್ಯ ಇಲಾಖೆ ಯವರು ಆನೆಯನ್ನು ಹಿಡಿದು ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಕೃಷಿಕರ ಹಾಗೂ ಸಾರ್ವಜನಿಕರ ಕ್ಷೇಮಕ್ಕಾಗಿ ಅರಣ್ಯ ಇಲಾಖೆ ಶೀಘ್ರ ಪರಿಹಾರ ನೀಡಬೇಕೆಂದರು.
ಅಧಿಕಾರಿಗಳಿಗೆ ಕರೆ ಮಾಡಿ ಇದಕ್ಕೊಂದು ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿದರು. ಇಲ್ಲದಿದ್ದರೆ ಈ ಬಗ್ಗೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಕೃಷಿಕ ಸಮಾಜ ಅಧ್ಯಕ್ಷರಾ ದ ವಿಜಯ್ ಕುಮಾರ್ ಕೋರಂಗ, ಒಳಮೊಗ್ರು ಶಕ್ತಿಕೇಂದ್ರ ಪ್ರಮುಖರಾದ ರಾಜೇಶ್ ರೈ ಪುರ್ಪುoಜ , ಬೂತ್ ಅಧ್ಯಕ್ಷ ಮೋಹನ್ ಗೌಡ ಎರೆಕಲಾ, ಶುಭಪ್ರಕಾಶ್ ಎರೆಕಲಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


























