ಪುತ್ತೂರು : ವಿವೇಕಾನಂದ ಕಾಲೇಜಿನ ಮಾಸ್ ಕಮ್ಯೂನಿಕೇಷನ್ ಮತ್ತು ಜರ್ನಲಿಸಂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ದಿವ್ಯಶ್ರೀ ವಿ. ರೈ ಮೊದಲ ರ‍್ಯಾಂಕ್ ಪಡೆದಿದ್ದಾರೆ.
ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ವಿದ್ಯಾರ್ಥಿನಿಯಾಗಿದ್ದ ದಿವ್ಯಶ್ರೀ ಕಳೆದ 2022-23ನೇ ಸಾಲಿನ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಪುತ್ತೂರಿನ ಅರಿಯಡ್ಕ ಗ್ರಾಮದ ತ್ಯಾಗರಾಜ ನಗರದ ನಿವಾಸಿ ವಿಠ್ಠಲ್ ರೈ ಹಾಗೂ ಶಾಲಿನಿ ರೈ ಅವರ ಪುತ್ರಿಯಾದ ದಿವ್ಯಶ್ರೀ. ಪೋಷಕರು ಹಾಗೂ ಸಹೋದರಿ ಮಧುಶ್ರೀ ಅವರೊಂದಿಗೆ ವಾಸವಿದ್ದು, ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.