ನಾಪತ್ತೆಯಾದ ಮಹಿಳೆಯೊಬ್ಬಳ ಮೃತದೇಹ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಂಡೋನೇಷ್ಯಾದಲ್ಲಿ ಈ ದುರ್ಘಟನೆ ಸಂಭವಿಸಿದೆ.
45 ವರ್ಷದ ಫರೀದಾ ಮೃತ ಮಹಿಳೆ.
ನಾಲ್ಕು ಮಕ್ಕಳ ತಾಯಿಯಾಗಿರುವ ಫರೀದಾ ಗುರುವಾರ ರಾತ್ರಿ ಕಾಣೆಯಾಗಿದ್ದಳು. ಮನೆಗೆ ಹೆಂಡತಿ ಹಿಂತಿರುಗದಿರುವುದನ್ನು ಕಂಡು ಆಕೆಯ ಪತಿ ಗಾಬರಿಗೊಂಡಿದ್ದರು. ಕೊನೆಗೆ ಗ್ರಾಮಸ್ಥರು ಸೇರಿ ಹುಡುಕಾಡಿದಾಗ 16 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ.
ಕಳೆದ ವರ್ಷ ಆಗ್ನೇಯ ಸಲವೆಸಿಯಾ ಟಿನಾಂಗ್ಜಿಯಾ ಜಿಲ್ಲೆಯಲ್ಲಿ ಇಂತಹದೇ ಘಟನೆ ಬೆಳಕಿಗೆ ಬಂದಿತ್ತು. ಅದೇ ಹಳ್ಳಿಯ ರೈತನೊಬ್ಬನನ್ನು 8 ಮೀಟರ್ ಉದ್ದದ ಹೆಬ್ಬಾವು ನುಂಗಿ ತೇಗಿತ್ತು. ಬಳಿಕ ಹೆಬ್ಬಾವನ್ನು ಆ ಊರಿನ ಜನರು ಕೊಂದಿದ್ದರು.



























