ಮುಂಬೈ : ಕತಾರ್ ಏರ್ವೇಸ್ನ ಮಾಜಿ ಗಗನಸಖಿ, ‘ದಿ ಟ್ರಯಲ್’ ವೆಬ್ ಸಿರೀಸ್ನಲ್ಲಿ ಕಾಜೋಲ್ ಜೊತೆ ಕೆಲಸ ಮಾಡಿದ್ದ ನಟಿ ನೋರ್ ಮಾಲಾಬಿಕಾ ದಾಸ್ ಸಾವನ್ನಪ್ಪಿದ್ದಾರೆ.
ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಸಾವಿನ ಸುದ್ದಿ ಎಲ್ಲರನ್ನೂ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಮಾಹಿತಿಗಳ ಪ್ರಕಾರ, ಜೂನ್ 6 ರಂದು ಪೊಲೀಸರು ನೂರ್ ಮಾಲಾಬಿಕಾ ದಾಸ್ ಅವರ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಾವಿಗೆ ಕಾರಣ ಇನ್ನೂ ಬಹಿರಂಗ ಆಗಿಲ್ಲ.
ಪೊಲೀಸರಿಗೆ ಮಾಹಿತಿ ಕೊಟ್ಟವರು ಯಾರು?
ನೂರಾ ಮಾಲಾಬಿಕಾ ವಾಸವಿದ್ದ ನಿವಾಸದಲ್ಲಿ ದುರ್ವಾಸನೆ ಬರುತ್ತಿತ್ತು. ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಯ ಬಾಗಿಲು ತೆಗೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಫ್ಯಾನ್ಗೆ ನೇತಾಡುತ್ತಿತ್ತು. ನಂತರ ಪೊಲೀಸರು ಕುಟುಂಬಸ್ಥರ ಸಂಪರ್ಕಿಸುವ ಪ್ರಯತ್ನ ಮಾಡಿದರು. ಆದರೆ ಮನೆಯವರಾಗಲಿ, ಸಂಬಂಧಿಕರಾಗಲಿ ಆಕೆಯ ಮೃತದೇಹವನ್ನು ಕೊಂಡೊಯ್ಯಲು ಮುಂದೆ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ಪೊಲೀಸರು ಎನ್ಜಿಒ ಒಂದರ ಸಹಾಯ ಪಡೆದು ನೂರ್ ಅವರ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನೂರ್ ಮಾಲಾಬಿಕಾ ದಾಸ್ ಯಾರು..?
ನೂರ್ ಮಾಲಾಬಿಕಾ ದಾಸ್ಗೆ 32 ವಯಸ್ಸಾಗಿತ್ತು. ಇವರು ಮೂಲತಃ ಅಸ್ಸಾಂ ನಿವಾಸಿ. ಇವರು ಅನೇಕ ಹಿಂದಿ ಚಲನಚಿತ್ರ ಮತ್ತು ವೆಬ್ ಸಿರೀಸ್ಗಳಲ್ಲಿ ಕೆಲಸ ಮಾಡಿದ್ದಾರೆ. ನೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಸಾವಿಗೂ ಮೊದಲು ಐದು ದಿನಗಳ ಹಿಂದೆ ಇನ್ಸ್ಟಾದಲ್ಲಿ ವಿಡಿಯೋ ಶೇರ್ ಮಾಡಿದ್ದರು. ಇದೀಗ ಅದೇ ಪೋಸ್ಟ್ಗೆ ಅಭಿಮಾನಿಗಳು ಕಮೆಂಟ್ ಮಾಡಿ ದುಃಖ ವ್ಯಕ್ತಪಡಿಸುತ್ತಿದ್ದಾರೆ.


























