ಕರ್ನಾಟಕ ಬ್ಯಾಂಕ್ ಪ್ರಧಾನ ಕಛೇರಿ ಮಂಗಳೂರು ಇದರ ನೇತೃತ್ವದಲ್ಲಿ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಗೆ ಭಾರತ್ ಬೆಂಜ್ ಕಂಪೆನಿಯ ಶಾಲಾ ಬಸ್ಸನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕರಾದ ಶ್ರೀ ರಾಜ.ಬಿ.ಎಸ್, ಶ್ರೀ ನಿರ್ಮಲ ಕುಮಾರ್, ಶ್ರೀಮತಿ.ಸಾಂಡ್ರಾ..ಎಂ.ಲೊರೇನಾ, ಶ್ರೀ ನಿರಂಜನ್ ಕುಮಾರ್, ಉಪ ವ್ಯವಸ್ಥಾಪಕರಾದ ಶ್ರೀ ವಸಂತ ಆರ್. ಹೇರಳೆ, ಸಹಾಯಕ ವ್ಯವಸ್ಥಾಪಕರಾದ ಶ್ರೀ ಮಾಧವ ನಾವಡ, ಮುಖ್ಯ ವ್ಯವಸ್ಥಾಪಕರಾದ ಶ್ರೀ ಶ್ರೀಹರಿ.ಪಿ ಮತ್ತು ವ್ಯವಸ್ಥಾಪಕರಾದ ಶ್ರೀ ಶ್ರೀಶ ಇವರ ಉಪಸ್ಥಿತಿಯಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಇವರಿಗೆ ಶಾಲಾ ಬಸ್ಸನ್ನು ಹಸ್ತಾಂತರ ಮಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರೀ ಭಾಸ್ಕರ ಆಚಾರ್ ಹಿಂದಾರು, ಕಾರ್ಯದರ್ಶಿ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ, ಶ್ರೀ ಜಯಗುರು ಆಚಾರ್ ಹಿಂದಾರು, ಶ್ರೀ ದೇರ್ಕಜೆ ವೆಂಕಟರಮಣ ಭಟ್ ಉಪಸ್ಥಿತರಿದ್ದರು.